ಲಿಂಗಸುಗೂರು : ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ನೇತಾಜಿ ಜನ್ಮದಿನಾಚರಣೆ
ಲಿಂಗಸುಗೂರು : ಸ್ಥಳೀಯ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸ್ವತಂತ್ರ ಸೇನಾನಿ, ಭಾರತೀಯ ರಾಷ್ಟ್ರೀಯ ಸೇನೆ ಸಂಸ್ಥಾಪಕ ನೇತಾಜಿ ಸುಭಾಸ್‍ಚಂದ್ರ ಭೋಸ್‍ರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ವೈ. ನೇತಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಹಾನ್ ಸ್ವತಂತ್ರ ಸೇನಾನಿಯಾಗಿದ್ದ ನೇತಾಜಿಯವರ ತತ್ವಾದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿವೆ. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟುವ ಮೂಲಕ ತಮ್ಮ ರಾಜತಾಂತ್ರಿಕ ಚಾಣಕ್ಯತೆಯನ್ನು ಜಗತ್ತಿಗೇ ತೋರಿಸಿಕೊಟ್ಟ ಮಹಾನ್ ಯೋಧ ನೇತಾಜಿಯಾಗಿದ್ದರು. ಅಂಥಹ ಮಹಾನ್‍ಪುರುಷನ ದಿನವನ್ನು ಪರಾಕ್ರಮ ದಿನವಾಗಿ ಆಚರಿಸುತ್ತಿರುವು ನಮ್ಮೆಲ್ಲರಿಗೂ ಹೆಮ್ಮೆ ಎಂದು ಹೇಳಿದರು.
ಯುವಕ ವಿದ್ಯಾರ್ಥಿಗಳು ರಾಷ್ಟ್ರನಾಯಕರ ತ್ಯಾಗ, ಬಲಿದಾನ, ಪರಾಕ್ರಮ, ದೇಶಪ್ರೇಮ, ದೇಶಾಭಿಮಾನವನ್ನು ಮೈಗೂಡಿಸಿಕೊಂಡು ರಾಷ್ಟಾಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.

