ಉಪಚುನಾವಣೆ ಪ್ರಚಾರದಲ್ಲಿ ಲಿಂಗಸುಗೂರು ಮಹಿಳಾ ಮೋರ್ಚಾ ಸಕ್ರೀಯ
ಲಿಂಗಸುಗೂರು : ಮಸ್ಕಿ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಲಿಂಗಸುಗೂರು ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮಸ್ಕಿ ಕ್ಷೇತ್ರದ ಸಂತೆಕೆಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರ
ವ್ಯಾಪ್ತಿಯ ಕುಣೆಕೆಲ್ಲೂರು, ಮಿಟ್ಟಿಕೆಲ್ಲೂರು, ಸರ್ಜಾಪೂರ,
ಕುಪ್ಪಿಗುಡ್ಡ, ಅಮರಾವತಿ, ಮಟ್ಟೂರು, ಪಾಮನಕೆಲ್ಲೂರು ಸೇರಿ ನಾನಾ ಗ್ರಾಮಗಳ ಮನೆ-ಮನೆಗೆ ಭೇಟಿ ನೀಡುವ ಮೂಲಕ ಮಹಿಳಾ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ.
ಪ್ರತಾಪಗೌಡ ಪಾಟೀಲ್‍ರು ಶಾಸಕರಾಗಿದ್ದಾಗ ಹತ್ತಾರು
ರೈತಪರ, ಜನಪರ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದಾರೆ.ಕ್ಷೇತ್ರದ ಜನರ ಹಿತ ಕಾಯಲು ತಮ್ಮ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ.
ಪುನಃ ಕ್ಷೇತ್ರದ ಜನರ ಸೇವೆಗೈಯಲು ಚುನಾವಣೆಗೆ ಸ್ಪರ್ಧಿಸಿದ್ದು,ಮತದಾರರು ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಹಾಕಬೇಕು. ಪ್ರತಾಪಗೌಡರು ಈ ಚುನಾವಣೆಯಲ್ಲಿ ವಿಜಯಿಯಾದರೆ ಸಚಿವರಾಗುತ್ತಾರೆ. ಸಚಿವರಾದ ಬಳಿಕ ಮಸ್ಕಿ ಕ್ಷೇತ್ರ ಸೇರಿ ರಾಯಚೂರು
ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸುತ್ತಾರೆ. ಸಾವಿರಾರು ಕೋಟಿ
ರೂಪಾಯಿಗಳ ಅನುದಾನ ಮಂಜೂರು ಮಾಡಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತಾರೆ. ಕಾಂಗ್ರೆಸ್ ಪಕ್ಷದ ಮಾತುಗಳಿಗೆ ಕಿವಿಗೊಡದೇ ಮತದಾರರು ಅಭಿವೃದ್ಧಿ ಚಿಂತಕರಾಗಿರುವ ಪ್ರತಾಪಗೌಡರಿಗೆ ಆಶೀರ್ವದಿಸಬೇಕೆಂದು ಮಹಿಳಾ ಪ್ರಚಾರದ ನೇತೃತ್ವ ವಹಿಸಿರುವ ಜಿಲ್ಲಾಧ್ಯಕ್ಷೆ ವಿಜಯರಾಜೇಶ್ವರಿ ಗೋಪಶೆಟ್ಟಿ ಮತದಾರರ ಬಳಿ
ವಿನಂತಿಸಿಕೊಳ್ಳುತ್ತಾ, ಮತಯಾಚನೆ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುಪುತ್ರಿ ಪ್ರೀತಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ, ಶೋಭಾ ಕಾಟವಾ, ತಾಲೂಕು ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ, ಜ್ಯೋತಿ ಸುಂಕದ್, ಮಸ್ಕಿ ಕ್ಷೇತ್ರದ ಅದ್ಯಕ್ಷೆ ಪ್ರಮೀಳಾ ಸೇರಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.

