ರಾಯಚೂರು

ಲಿಂಗಸುಗೂರು : ಕೋವಿಡ್ ಕೇರ್ ಸೆಂಟರ್‍ನಲ್ಲಿ ಚೇತರಿಸಿಕೊಂಡ ಸೊಂಕಿತ ಅಜ್ಜಿ

ಲಿಂಗಸುಗೂರು : ಸ್ಥಳೀಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ಸೊಂಕಿನಿಂದ ಬಳಲುತ್ತಿರುವ ಅಜ್ಜಿಯೊಬ್ಬರು ಚಿಕಿತ್ಸೆಗೆಂದು ದಾಖಲಾಗಿದ್ದು. ಇಲ್ಲಿನ ವೈದ್ಯರ ಚಿಕಿತ್ಸೆ ಹಾಗೂ ಸಿಬ್ಬಂಧಿಗಳ ಆರೈಕೆಯಿಂದ ಅಜ್ಜಿ ಸಂಪೂರ್ಣವಾಗಿ ಚೇತರಿಸಿಕೊಂಡ ಪರಿಣಾಮ ಮನೆಗೆ ಕಳುಹಿಸಲಾಗಿದೆ.


ಈ ಬಗ್ಗೆ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಮಾಹಿತಿ ನೀಡುತ್ತಾ, ಹಿರೇಮನ್ನಾಪೂರ ಗ್ರಾಮದ ಕಳಕಮ್ಮ ಗಂಡ ದೊಡ್ಡಪ್ಪ (65) ಎನ್ನುವ ಅಜ್ಜಿ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಕೇರ್ ಸೆಂಟರ್‍ಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ನಮ್ಮ ವೈದ್ಯರ ತಂಡದ ಚಿಕಿತ್ಸೆಗೆ ಸ್ಪಂದಿಸಿದ ಅಜ್ಜಿ ಮೇ 25ಕ್ಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಿಂದ ಅವರನ್ನು ಸುರಕ್ಷಿತವಾಗಿ ಮನೆಯವರೊಂದಿಗೆ ಕಳುಹಿಸಿ ಕೊಡಲಾಯಿತು ಎಂದರು.


ಏಪ್ರಿಲ್ 13ಕ್ಕೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇಲ್ಲಿಯವೆಗೆ ಒಟ್ಟು 199 ಸೊಂಕಿತ ಪ್ರಕರಣಗಳು ದಾಖಲಾಗಿವೆ. ಇದುವರೆಗೂ 103 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. 46 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. 18 ಸೊಂಕಿತರು ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದು, ಸಧ್ಯಕ್ಕೆ ಒಟ್ಟು 33 ಜನ ಸೊಂಕಿತರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ರುದ್ರಗೌಡ ಹೇಳಿದರು.

Leave a Reply

Your email address will not be published. Required fields are marked *

error: Content is protected !!