ಕಲ್ಯಾಣ ಕರ್ನಾಟಕರಾಯಚೂರು

ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಆಚರಣೆ

ಲಿಂಗಸುಗೂರು : ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಇದಕ್ಕೂ ಮುಂಚೆ ಸ್ವಚ್ಛ ಭಾರತ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮವನ್ನು ಕಸಬಾ ಲಿಂಗಸುಗೂರು ಗ್ರಾಮದ
ಶ್ರೀ ಕುಪ್ಪಿಸ್ವಾಮಿ ದೇವಸ್ಥಾನದ ಆವರಣದಲ್ಲಿ
ನೆರವೇರಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ ವಜ್ಜಲ್, ಮುಖಂಡರಾದ ಪ್ರಭುಸ್ವಾಮಿ ಅತನೂರ್, ಚನ್ನಬಸವ ಹಿರೇಮಠ್, ಅನಂತ ದಾಸ್, ಹೆಚ್.ವಿ. ಪವರ್, ಸುರೇಶ್ ಮೇಟಿ, ಶ್ವೇತಾ ಲಾಲಗುಂದಿ, ನೀಲಮ್ಮ ಪಾಟೀಲ್, ಅಭಿಷೇಕ್, ಕೃಷ್ಣ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!