ಸೇವಾ ಸಮರ್ಪಣ ಅಭಿಯಾನ : ಪತ್ರ ಚಳುವಳಿ
ಲಿಂಗಸುಗೂರು : ಸೇವಾ ಸಮರ್ಪಣಾ ಅಭಿಯಾನದ ಕೊನೆಯ ದಿನವಾಗಿದ್ದು, ಮಂಡಲದ ಪ್ರತಿ ಬೂತ್ ಗಳಿಮ್ ಮಹಿಳಾ ಕಾರ್ಯಕರ್ತರು ಪ್ರಧಾನಿ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳ ಜೊತೆಗೆ ಅಭಿಪ್ರಾಯ ಬರೆಯುವ ಮೂಲಕ ಪತ್ರ ಚಳುವಳಿ ಕಾರ್ಯಕ್ರಮವನ್ನು ಹಮ್ಮಿಕೊಳಲಾಯಿತು.

ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಜಯಶ್ರೀ ಸಕ್ರಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.
ವಿಶೇಷವಾಗಿ ಫಲಾನುಭವಿಗಳು ಪ್ರಧಾನಿಯವರಿಗೆ ಪೋಸ್ಟ್ ಕಾರ್ಡಗಳನ್ನು ಕಳುಹಿಸುವಂತ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು ಲಿಂಗಸೂಗೂರು ಮಹಿಳಾ ಮೋರ್ಚಾ ವತಿಯಿಂದ 2000 ಪೋಸ್ಟ್ ಕಾರ್ಡ್ ಗಳನ್ನು ಕಳುಹಿಸಲಾಗಿದೆ. ಹಾಗೂ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ನೀಲಮ್ಮ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಲಾಲಗುಂದಿ, ಸ್ಮಿತಾ, ಭಾನುಮತಿ, ಲಕ್ಷ್ಮಿ, ಈರಮ್ಮ, ಸಿದ್ದಮ್ಮ ಸೇರಿ ಇನ್ನಿತರರು ಉಪಸ್ಥಿತರಿದ್ದರು.
