ಈದ್‍ಮಿಲಾದ್-ವಾಲ್ಮೀಕಿ ಜಯಂತಿ : ಶಾಂತಿಸಭೆ
ಲಿಂಗಸುಗೂರು : ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಈದ್‍ಮಿಲಾದುನ್ನಬಿ ಹಾಗೂ ವಾಲ್ಮೀಕಿ ಜಯಂತಿ ನಿಮಿತ್ಯ ಸ್ಥಳೀಯ ಗುರುಭವನದಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಸರಕಾರದ ನಿಯಮಗಳನುಸಾರ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕು. ಸರಕಾರದ ಆದೇಶದ ಪ್ರಕಾರ ಮೆರವಣಿಗೆಗೆ ಅವಕಾಶ ಇರುವುದಿಲ್ಲ. 100 ಜನರಿಗಿಂತ ಹೆಚ್ಚು ಒಂದೆಡೆ ಸೇರಲು ಅವಕಾಶ ಇರುವುದಿಲ್ಲ. ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮುಸ್ಲೀಂ ಬಾಂದವರು ಮಸ್ಜಿದ್‍ಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಯಾವ ಕಾರಣಕ್ಕೂ ಪೋಲಿಸರಿಗೆ ಕೆಲಸ ಕೊಡದೇ ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು ಮಾತನಾಡಿದರು.
ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‍ಐ ಪ್ರಕಾಶ ರೆಡ್ಡಿ, ಪುರಸಭೆ ಉಪದ್ಯಕ್ಷ ಮಹ್ಮದ್ ರಫಿ, ಸಮಾಜ ಕಲ್ಯಾಣ ಅಧಿಕಾರಿ ರವಿಕುಮಾರ ಹಟ್ಟಿ, ಮುಖಂಡರಾದ ಖಾದರಬಾಷಾ, ನಂದೇಶ ನಾಯಕ, ಪ್ರಭುಸ್ವಾಮಿ ಅತ್ತನೂರು, ಜಿಲಾನಿಪಾಷಾ, ಮಹೆಬೂಬ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

