ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ನೇಮಕ
ಲಿಂಗಸುಗೂರು : ಕರುನಾಡ ವಿಜಯಸೇನೆ ಸಂಘಟನೆಯ ರಾಯಚೂರು ಜಿಲ್ಲಾ ಅದ್ಯಕ್ಷರನ್ನಾಗಿ ಎಂ.ಸಿ. ಚಂದ್ರಶೇಖರ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾದ್ಯಕ್ಷ ದೀಪಕ್ ಹ.ನೀ. ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕನ್ನಡಿಗರ ಧ್ವಜಿ-ಕನ್ನಡ ಝೇಂಕರಿಸಲಿ ಎಂಬ ಶೀರ್ಷಿಕೆಗೆ ಬದ್ಧರಾಗಿ, ಸಂಘಟನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟುವಲ್ಲಿ ಶ್ರಮಿಸುವ ಜೊತೆಗೆ ಕಾನೂನು ಚೌಕಟ್ಟಿನಲ್ಲಿ ಸಮಾಜದ ಒಳತಿಗೆ ಸದಾ ಚುರುಕಾಗಿ ಕೆಲಸ ನಿರ್ವಹಿಸಬೇಕು. ಸರಕಾರದ ಸವಲತ್ತುಗಳನ್ನು ಬಡವರ, ನಿರ್ಗತಿಕರ ಮತ್ತು ಅರ್ಹರಿಗೆ ತಲುಪಿಸಲು ಕಾರ್ಯೋನ್ಮುಖರಾಗುವಂತೆ ಆದೇಶ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

