ರಾಯಚೂರು

ಮತ ಏಣಿಕೆ ಕೇಂದ್ರ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ – ಎಸ್ಪಿ ಪ್ರಕಾಶ ನಿಕ್ಕಂ


ರಾಯಚೂರು,ಡಿ.೨೯:- ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಜರುಗಿದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮತ ಏಣಿಕೆ ಪ್ರಕ್ರಿಯು ಡಿ.೩೦ರ ಬೆಳಿಗ್ಗೆ ೮ ಗಂಟೆಯಿಂದ ಜಿಲ್ಲೆಯ ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಂ ಅವರು ತಿಳಿಸಿದ್ದಾರೆ.


ಮತ ಏಣಿಕೆಯು ಅತ್ಯಂತ ಪಾರದರ್ಶಕತೆ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದ್ದು, ಮತ ಎಣಿಕೆ ದಿನದಂದು ಜಿಲ್ಲೆಯ ಎಲ್ಲಾ ಮತ ಎಣಿಕೆ ತಾಲೂಕು ಕೇಂದ್ರಗಳ ಸುತ್ತಲೂ ೧೦೦ ಮೀ.ರವರೆಗೆ ೧೪೪ ಸೆಕ್ಷನ್ ಜಾರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.


ರಾಯಚೂರು ತಾಲೂಕು ಮತ ಎಣಿಕೆ ಕೇಂದ್ರದಲ್ಲಿ ೦೧ ಡಿಎಸ್‌ಪಿ, ೯೪ ಸಿಪಿಐ, ೧೪ ಪಿಎಸ್‌ಐ, ೩೯ ಎಎಸ್‌ಐ, ೩೨೭ ಹೆಚ್‌ಸಿ / ಪಿಸಿ ಹಾಗೂ ೪೦ ಗೃಹ ರಕ್ಷಕ ದಳ ಸಿಬ್ಬಂದಿ.


ಮಾನವಿ ಮತ್ತು ಸಿರವಾರ ತಾಲ್ಲೂಕು ಮತ ಎಣಿಕೆ ಕೇಂದ್ರಗಳಲ್ಲಿ ೦೧ ಸಿಪಿಐ, ೦೩ ಪಿಎಸ್‌ಐ, ೦೮ ಎಎಸ್‌ಐ, ೯೦ ಹೆಚ್‌ಸಿ / ಪಿಸಿ.
ದೇವದುರ್ಗ ತಾಲೂಕು ಮತ ಎಣಿಕೆ ಕೇಂದ್ರದಲ್ಲಿ ೦೧ ಸಿಪಿಐ, ೦೪ ಪಿಎಸ್‌ಐ, ೦೯ ಎಎಸ್‌ಐ, ೯೬ ಹೆಚ್‌ಸಿ/ಪಿಸಿ.


ಲಿಂಗಸುಗೂರು ತಾಲೂಕು ಮತ ಎಣಿಕೆ ಕೇಂದ್ರದಲ್ಲಿ ೦೧ ಡಿಎಸ್‌ಪಿ, ೦೧ ಸಿಪಿಐ, ೦೪ ಪಿಎಸ್‌ಐ, ೦೯ ಎಎಸ್‌ಐ, ೯೬ ಹೆಚ್‌ಸಿ / ಪಿಸಿ.


ಸಿಂಧನೂರು ತಾಲೂಕು ಮತ ಎಣಿಕೆ ಕೇಂದ್ರದಲ್ಲಿ ೦೧ ಡಿಎಸ್‌ಪಿ, ೦೧ ಸಿಪಿಐ, ೦೫ ಪಿಎಸ್‌ಐ, ೧೬ ಎಎಸ್‌ಐ, ೧೩೯ ಹೆಚ್‌ಸಿ/ಪಿಸಿ , ೦೨ ಗೃಹ ರಕ್ಷಕ ದಳ ಸಿಬ್ಬಂದಿ.


ಮಸ್ಕಿ ತಾಲೂಕು ಮತ ಎಣಿಕೆ ಕೇಂದ್ರದಲ್ಲಿ ೦೧ ಸಿಪಿಐ, ೦೧ ಪಿಎಸ್‌ಐ, ೦೩ ಎಎಸ್‌ಐ, ೩೦ ಹೆಚ್‌ಸಿ-ಪಿ ಸಿಬ್ಬಂದಿಯನ್ನು ನೇಮಿಸಲಾಗಿದೆ.


ಒಟ್ಟು ಜಿಲ್ಲೆಯಲ್ಲಿ ೦೩ ಡಿಎಸ್‌ಪಿ, ೦೯ ಸಿಪಿಐ, ೩೧ ಪಿಎಸ್‌ಐ, ೮೪ ಎಎಸ್‌ಐ, ೭೭೮ ಹೆಚ್‌ಸಿ / ಪಿಸಿ, ೪೬ ಗೃಹ ರಕ್ಷಕ ದಳ ಸಿಬ್ಬಂದಿ ಹಾಗೂ ೧೦ ಡಿಎಆರ್ ತುಕಡಿ ಮತ್ತು ೦೪ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಮತಗಟ್ಟೆ ಕೇಂದ್ರಗಳ ಸುತ್ತಲೂ ಬ್ಯಾರಿಕೇಡ್ ವ್ಯವಸ್ಥೆ ಸಹ ಮಾಡಲಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!