ಎಇಇ ಮಹೆಬೂಬಸಾಬ ನಿವೃತ್ತಿ : ನದಾಫ್ ಸಂಘದಿಂದ ಗೌರವ ಸನ್ಮಾನ
ಲಿಂಗಸುಗೂರು : ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಎನ್‍ಆರ್‍ಬಿಸಿ ವಿಭಾಗದ ಎಇಇ ಆಗಿದ್ದ ಮಹೆಬೂಬಸಾಬ ಸಂತೆಕೆಲ್ಲೂರು ಇವರು ವಯೋನಿವೃತ್ತಿ ಹೊಂದಿದ ಕಾರಣ ತಾಲೂಕು ನದಾಫ್ ಸಂಘ ಹಾಗೂ ಗೆಳೆಯರ ಬಳಗದಿಂದ ಗೌರವ ಸನ್ಮಾನ ಮಾಡಲಾಯಿತು.
ಮಹೆಬೂಬಸಾಬರ ವೃತ್ತಿ ಬದುಕಿನಲ್ಲಿ ತಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂಧಿಗಳು ಸೇರಿ ಎಲ್ಲರೊಡನೆ ಜಾತ್ಯಾತೀತವಾಗಿ ಬೆರೆಯುವ ಮೂಲಕ ಇಲಾಖೆ ಕರ್ತವ್ಯದ ಜೊತೆಗೆ ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಂಘದ ಜಿಲ್ಲಾ ಅದ್ಯಕ್ಷರಾಗಿರುವ ಇವರ ವಿಶ್ರಾಂತ ಜೀವನ ನೆಮ್ಮದಿಯಿಂದ ಸಾಗಲಿ ಎಂದು ಸಮಾಜಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್ ಶುಭ ಕೋರಿದರು.
ನದಾಫ್ ಸಂಘದ ತಾಲೂಕು ಅದ್ಯಕ್ಷ ಖಾದರಸಾಬ ಅಂಗಡಿ, ಪ್ರಧಾನ ಕಾರ್ಯದರ್ಶಿ ಹಸನಸಾಬ ಆನೆಹೊಸೂರು, ಮುಖಂಡರಾದ ಹುಸೇನ್‍ಸಾಬ ನಿಲೋಗಲ್, ಯಮನೂರ ನದಾಫ್ ಮುದಗಲ್, ಮಹೆಬೂಬಸಾಬ ಕೋಟಿ, ಮಹ್ಮದ್ ಖಾಜಾಹುಸೇನ್, ರಾಜಾಸಾಬ, ಅಮೀನ್‍ಸಾಬ ಮಟ್ಟೂರು, ಮೌಲಾಸಾಬ, ಸರಕಾರಿ ನೌಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಮುಸ್ತಫಾ, ಮಹೆಬೂಬ, ಸನಾವುಲ್ಲಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

