ಲಿಂಗಸುಗೂರು : ವಿವಿದೆಡೆ ಪರಿಸರ ದಿನಾಚರಣೆ
ಲಿಂಗಸುಗೂರು : ವಿಶ್ವ ಪರಿಸರ ದಿನಾಚರಣೆಯನ್ನು ಪಟ್ಟಣದ ವಿವಿದೆಡೆ ಆಚರಣೆ ಮಾಡಲಾಯಿತು. ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡ ಪಾಮಯ್ಯ ಮುರಾರಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್‍ರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಪರಿಸರ ದಿನಾಚರಣೆಯನ್ನು ಆಚರಿಸಿದರು.
ಮುಖಂಡರಾದ ಗುಂಡಪ್ಪ ನಾಯಕ, ಗುಂಡಪ್ಪ ಮೇದಿನಾಪೂರ, ಪರಶುರಾಮ ನಗನೂರು, ಚನ್ನಬಸವ ಸೇರಿ ಇತರರು ಇದ್ದರು.

