ನಿತ್ಯದ ಯೋಗವೇ ಸದೃಢ ಆರೋಗ್ಯಕ್ಕೆ ರಾಮಬಾಣ : ಬಾಬಾ ಮಾಸಿಲಾ
ಲಿಂಗಸುಗೂರು : ಪ್ರತಿನಿತ್ಯ ಸೂರ್ಯಾಸ್ತಕ್ಕೂ ಮುನ್ನ ನಸುಕಿನಲ್ಲಿ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಂಡವರು ಸದೃಢ ಆರೋಗ್ಯವನ್ನು ಪಡೆದುಕೊಳ್ಳುತ್ತಾರೆ. ಸದೃಢ ಆರೋಗ್ಯಕ್ಕೆ ಯೋಗವೇ ರಾಮಬಾಣವಾಗಿದೆ ಎಂದು ಯೋಗಗುರು ಬಾಬಾ ಮಾಸಿಲಾ ದೊರೈ ಹೇಳಿದರು.
ಸ್ಥಳೀಯ ವಿಶ್ವೇಶ್ವರಯ್ಯ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಭ್ಯಾಸ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗದಿಂದ ಮನುಷ್ಯ ನಿರೋಗಿಯಾಗಿರುತ್ತಾನೆ. ಇತ್ತೀಚೆಗಿನ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ, ದೈಹಿಕ ಸದೃಢತೆಗೆ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಪ್ರಾಣಾಯಾಮ, ವಾಕಿಂಗ್ ಜಾಕಿಂಗ್, ಆಸನಗಳನ್ನು ಹೇಳಿಕೊಡುವ ಮೂಲಕ ತಪ್ಪದೇ ಪ್ರತಿದಿನವೂ ಯೋಗಾಭ್ಯಾಸ ಮಾಡುವಂತೆ ಶಿಬಿರಾರ್ಥಿಗಳಿಗೆ ಎಂದು ಕರೆ ನೀಡಿದರು.

