ಈಚನಾಳ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮ ಪಂಚಾಯಿತಿಯ ಅದ್ಯಕ್ಷ-ಉಪಾದ್ಯಕ್ಷರ ಚುನಾವಣೆ ಗುರುವಾರ ನಡೆಯಿತು. ಚುನಾವಣೆಯಲ್ಲಿ ಅವಿರೋಧವಾಗಿ ಆದಪ್ಪ ಮೇಟಿ ಅದ್ಯಕ್ಷರಾಗಿ, ಅಮರಗುಂಡಮ್ಮ ಗಾಳಪೂಜೆ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಿವಕುಮಾರ ಘೋಷಣೆ ಮಾಡಿದರು.
ಮುಖಂಡರಾದ ಬಸನಗೌಡ ಮೇಟಿ, ಲಿಂಗರಡ್ಡೆಪ್ಪ ಮೇಟಿ, ಬಸನಗೌಡ ಪಾಟೀಲ್, ಶರಣಬಸವ ಹಡಪದ್ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಸಂಘ ಹಾಗೂ ವಾಲ್ಮೀಕಿ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು. ತಮ್ಮನ್ನು ಆಯ್ಕೆ ಮಾಡಿದ ಸರ್ವ ಸದಸ್ಯರಿಗೂ ಹಾಗೂ ಗ್ರಾಮಸ್ಥರಿಗೂ ನೂತನ ಅದ್ಯಕ್ಷ-ಉಪಾದ್ಯಕ್ಷರುಗಳು ಅಭಿನಂದನೆ ಸಲ್ಲಿಸಿದರು.

