ಈಚನಾಳ ಗ್ರಾಮದ ರಸ್ತೆ, ಚರಂಡಿಗಳ ದುರಸ್ತಿಗೆ ಆಗ್ರಹ
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮದ ಎರಡನೇ ವಾರ್ಡ್‍ನ ರಸ್ತೆ ಹಾಗೂ ಚರಂಡಿಗಳು ಹದಗೆಟ್ಟಿದ್ದು, ಕೂಡಲೇ ಪಂಚಾಯತ್ ಆಡಳಿತ ಮಂಡಳಿ ದುರಸ್ತಿಗೆ ಮುಂದಾಗಬೇಕೆಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪಂಚಾಯತ್ ಆಡಳಿತದ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದೇ ಇರುವುದು ಖಂಡನೀಯ. ಕೂಡಲೇ ಪಿಡಿಓರಿಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅದ್ಯಕ್ಷ ಶರಣೋಜಿ ಪವಾರ್, ಶಿವುಕೆಂಪು, ಶರೀಫ್, ಮುತ್ತಣ್ಣ, ಮೌನೇಶ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.
