ರಾಯಚೂರು

ಮಗಳ ಹುಟ್ಟುಹಬ್ಬಕ್ಕೆ ನೀರಿನ ಅರವಟ್ಟಿಗೆ ಆರಂಭಿಸಿದ ಸಮಾಜಸೇವಕ

ಲಿಂಗಸುಗೂರು : ಮಕ್ಕಳ ಭವಿಷ್ಯಕ್ಕಾಗಿ ಕೇವಲ
ಸ್ವಾರ್ಥಪರತೆಯನ್ನು ಮೆರೆಯುವ ಬಹುತೇಕರ ಮಧ್ಯೆ
ಮಗಳ ಹುಟ್ಟುಹಬ್ಬದ ನಿಮಿತ್ಯ ಸಾರ್ವಜನಿಕರ ದಾಹ ತಣಿಸಲು ತಣ್ಣೀರಿನ ಅರವಟ್ಟಿಗೆಯನ್ನು ಆರಂಭ ಮಾಡುವ ಮೂೂಲಕ ಸಮಾಜ ಸೇವಕ ಶರಣ ಬಸವ ಹಡಪದ್ ಮಾಡಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ.

ತಾಲೂಕಿನ ಈಚನಾಳ ಗ್ರಾಮದ ಗದ್ದೆಮ್ಮ ದೇವಿ ಜಾತ್ರಾ
ಮಹೋತ್ಸವ ಹಾಗೂ ಮಗಳ ಮೊದಲ ಹುಟ್ಟುಹಬ್ಬದ
ಸಂಭ್ರಮವನ್ನು ಸ್ನೇಹಿತರೊಟ್ಟಿಗೆ ಆಚರಿಸಿದ ಶರಣಬಸವ ಜನರ ದಾಹ ತಣಿಸಲು ಕುಡಿಯುವ ನೀರಿನ ಅರವಟ್ಟಿಗೆಯನ್ನು್ನ ಆರಂಭಿಸಿದ್ದಾರೆ.ಅರವಟ್ಟಿಗೆಯನ್ನು ಉದ್ಘಾಟಿಸಿದ ಕರುನಾಡ ವಿಜಯಸೇನೆಯ
ಉತ್ತರ ಕರ್ನಾಟಕದ ಉಸ್ತುವಾರಿ ಶಿವಪುತ್ರ ಗಾಣದಾಳ ಮಾತನಾಡಿ,ಹುಟ್ಟುಹಬ್ಬಕ್ಕೆ ವ್ಯರ್ಥ ಖರ್ಚು ಮಾಡುವ ಬದಲು ಸಮಾಜಮುಖಿಯಾದ ಉತ್ತಮ ಕಾರ್ಯಕ್ಕೆ ಕೈಹಾಕಿರುವುದು ಶ್ಲಾಘನೀಯ ಕಾರ್ಯ.ಶರಣಬಸವ ಅವರು ಸಮಾಜಸೇವೆಯಲ್ಲಿ ತೊಡಗಿಕೊಂಡು ಬಡವರ
ಬಗ್ಗೆ ಕಾಳಜಿ ವಹಿಸುವ ಪರೋಪಕಾರಿ ಜೀವಿಯಾಗಿದ್ದಾರೆ.
ಇವರಂತೆಯೇ ನಮ್ಮ ಯುವ ಪೀಳಿಗೆ ದುಶ್ಚಟಗಳತ್ತ ವಾಲದೇ,ನಾಲ್ಕು ಜನರಿಗೆ ಹಿತವಾಗುವಂಥಹ ಕೆಲಸಗಳನ್ನು ಮಾಡುವತ್ತ ಮುಂದಾಗಬೇಕೆಂದು ಕರೆ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಅಂಗಡಿ, ಸಂಘಟನೆ ಮುಖಂಡರಾದ ಪ್ರಭುರಾಜ ಹವಾಲ್ದಾರ್, ಮರಿಯಪ್ಪ ಕಟ್ಟಿಮನಿ,ಬಾಲನಗೌಡ, ರಮೇಶ ಸುಂಕದ್, ಬಸವರಾಜ ಪತ್ತಾರ್, ನಾಗರಾಜ ಗುಡದನಾಳ, ಆದಪ್ಪ ಕಸಬಾಲಿಂಗಸಗೂರು, ಗ್ಯಾನಪ್ಪ ಗುಜ್ಜಲ್,ವಿರೇಶ ಗುಂಡಸಾಗರ, ಅಮರೇಶ ಮೇಟಿ ಸೇರಿ ಇತರರು ಈ
ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!