ಪೋಲಿಸರಿಂದ ಕುಡಿಯುವ ನೀರಿನ ಅರವಟ್ಟಿಗೆ ಆರಂಭ : ಸದ್ಬಳಕೆಗೆ ಕರೆ
ಲಿಂಗಸುಗೂರು : ಪೋಲಿಸ್ ಇಲಾಖೆ ವತಿಯಿಂದ ಸ್ಥಳೀಯ ಠಾಣೆಯ ಬಳಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಲಾಯಿತು.
ಅರವಟ್ಟಿಗೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್‍ಪಿ
ಎಸ್.ಎಸ್.ಹುಲ್ಲೂರು, ಬೇಸಿಗೆ ಕಾಲ ಆರಂಭವಾದ ಪ್ರಯುಕ್ತ ಸಾರ್ವಜನಿಕರಿಗೆ ದಾಹ ತಣಿಸಲು ಅಲ್ಲಲ್ಲಿ ಹಲವು ಸಂಘ-ಸಂಸ್ಥೆಗಳು ನೀರಿನ ಅರವಟ್ಟಿಗೆಯನ್ನು ಆರಂಭಿಸುವುದು ವಾಡಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಪೋಲಿಸ್ ಇಲಾಖೆಯೂ ಈ ಕೆಲಸಕ್ಕೆ ಮುಂದಾಗಿದ್ದು
ರಸ್ತೆಯಲ್ಲಿ ಓಡಾಡುವ ಜನರಿಗೆ ತಂಪಾದ ನೀರು ಕುಡಿಸಿ ದಾಹ ತಣಿಸಲು ಮುಂದಾಗಿದೆ. ಜನರು ಇದರ ಸದ್ಬಳಕೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಸೇರಿ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು. ಅರವಟ್ಟಿಗೆ ಸೇವೆಯನ್ನು ಲೋಕೇಶ್ ಕುಪ್ಪಿಗುಡ್ಡ, ನಿರಂತರ
ಸೇವೆಯನ್ನು ವಿನಯ ಮೂಲಿಮನಿ ವಹಿಸಿಕೊಂಡಿರುತ್ತಾರೆ.

