ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯ : ಮಿಶ್ರಾ
ಲಿಂಗಸುಗೂರು : ಸದೃಢ ಸಮಸಮಾಜ ನಿರ್ಮಾಣದಲ್ಲಿ
ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ
ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಪ್ರಗತಿಪರ ರೈತಮಹಿಳೆ ಕವಿತಾ ಮಿಶ್ರಾ ಹೇಳಿದರು.
ಸ್ಥಳೀಯ ಡಾ.ಸುಧಾಮೂರ್ತಿ ಇನ್ಫೋ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬಿ.ಎ. ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಹಿಳೆ ಸಮಾಜದ ದೊಡ್ಡ ಶಕ್ತಿ. ಮಹಿಳೆ ಭೂಮಿಯಂತೆ ತ್ಯಾಗಮಯಿ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರ, ಹೆಣ್ಣು
ಭಾರತೀಯ ಸಂಸ್ಕøತಿಯ ಪ್ರತಿಬಿಂಬ ಎಂದರು.
ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ (ರಿ) ಅರ್ಪಿತ
ಕೆಂಚಪ್ಪ ಭಾವಿಮನಿ, ಸರಸ್ವತಿ ಅಬಕಾರಿ ಇನ್ಸಪೆಕ್ಟರ್, ಗಂಗಮ್ಮ ಸಂತ್ಯಂಪೇಟೆ ನಿವೃತ್ತ ಪ್ರಾಚಾರ್ಯ, ಸರಕಾರಿ ಪ್ರಥಮ ದರ್ಜೆ ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ಪ್ರಾಚಾರ್ಯ, ಕಮಲಾಬಾಯಿ,ಗೌರವ ಅಧ್ಯಕ್ಷ ಸಂಗಪ್ಪ ಭಾವಿಮನಿ, ಆಡಳಿತಾಧಿಕಾರಿ ವಿನೋದ ಗುಡಿಮನಿ, ಡಾ. ಸುಧಾಮೂರ್ತಿ ಇನ್ಫೋ ಮಹಿಳೆ ಪ್ರಾಚಾರ್ಯ
ಅಮರೇಶ ವೆಂಕಟಾಪೂರ, ಉಪನ್ಯಾಸಕರಾದ ಮಂಜುಳಾ ಸಬರದ,ಬಸವಲಿಂಗಪ್ಪ ಸೇರಿ ವಿದ್ಯಾರ್ಥಿಗಳು ಇದ್ದರು.

