ರಾಯಚೂರು

ಸರಕಾರಿ ಪದವಿ ಕಾಲೇಜು ಬಳಿ ಬಸ್‍ಗಳ ನಿಲುಗಡೆಗೆ ಒತ್ತಾಯ

ಲಿಂಗಸುಗೂರು : ಪಟ್ಟಣದ ಹೊರ ವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ವಿದ್ಯಾರ್ಥಿಗಳು ತೆರಳಲು ಸಾರಿಗೆ ಬಸ್‍ಗಳನ್ನು ನಿಲುಗಡೆ ಮಾಡುವಂತೆ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.


ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಪಟ್ಟಣದಿಂದ ಸುಮಾರು 2 ಕಿ.ಮೀ. ದೂರ ಇರುವ ಕಾಲೇಜಿಗೆ ಬಸ್ಟಾಂಡ್‍ನಿಂದ ವಿದ್ಯಾರ್ಥಿಗಳು ತೆರಳಲು ಮತ್ತು ಕಾಲೇಜು ಮುಗಿದ ಬಳಿಕ ಬಸ್ಟಾಂಡ್‍ಗೆ ಬರಲು ತೀವ್ರ ತೊಂದರೆಯಾಗುತ್ತಿದೆ. ಕೋರಿಕೆ ನಿಲ್ದಾಣದ ಬೋರ್ಡ್ ಹಾಕಲಾಗಿದ್ದರೂ, ಬಹುತೇಕ ಬಸ್‍ಗಳು ಅಲ್ಲಿ ನಿಲ್ಲುವುದಿಲ್ಲ. ಈಗಾಗಲೇ ಈ ಬಗ್ಗೆ ಅಧಿಕಾರಿಗಲ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮುದಗಲ್ ಕಡೆಯಿಂದ ಬರುವ ಬಸ್‍ಗಳು ಕಾಲೇಜು ಬಳಿ ನಿಲ್ಲಿಸಬೇಕು. ಬಸ್ಟಾಂಡ್‍ಗೆ ವಿದ್ಯಾರ್ಥಿಗಳು ತೆರಳಲು ಅನುಕೂಲವಾಗಲು ಕಾಲೇಜು ಅವಧಿ ಮುಗಿದ ಬಳಿಕ ಬಸ್‍ಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ವಿದ್ಯಾರ್ಥಿಗಳಾದ ವಿನಯ, ನವೀನ್, ಬಸವರಾಜ, ಶರಣಬಸವ, ಹೇಮಂತ, ಯಶೋಧಾ, ವಿನೂತಾ, ಅಶ್ವಿನಿ, ಪೂಜಾಶ್ರೀ, ಬಸಣ,್ಣ ಶೀಲ್ಪಾ, ಅಂಬುಜಾ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

error: Content is protected !!