ಶ್ರೀನಾಗ ಪಬ್ಲಿಕ್ ಶಾಲೆಯಲ್ಲಿ ಗಣತಂತ್ರ ದಿನಾಚರಣೆ
ಲಿಂಗಸುಗೂರು : ಸ್ಥಳೀಯ ಶ್ರೀನಾಗ ಪಬ್ಲಿಕ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಣತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಹಿರಿಯ ಮುಖಂಡ ಕರಿಯಪ್ಪ ವಜ್ಜಲ್ ಧ್ವಜಾರೋಹಣ ನೆರವೇರಿಸಿದರು.

ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ವೇತಾ ಪಾಟೀಲ್, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶಿವಕುಮಾರ್, ಶಾಲೆಯ ಮುಖ್ಯಶಿಕ್ಷಕ ಗದ್ಯಪ್ಪ, ಶಿಕ್ಷಕಿಯರಾದ ಹರ್ಷಿತಾ, ರೇಖಾ, ಮಲ್ಲಮ್ಮ, ಮುಖಂಡರಾದ ಅಮರೇಶ್ ಮಡ್ಡಿ, ವೆಂಕನಗೌಡ ಪಾಟೀಲ್ ಸೇರಿ ಶಾಲಾ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇದ್ದರು.

