ರಾಯಚೂರು

ಫುಟ್‍ಪಾತ್ ಅಂಗಡಿಗಳ ಪರಿಶೀಲನೆ : ಸ್ವಚ್ಛತೆಗೆ ತಾಕೀತು

ಲಿಂಗಸುಗೂರು : ಕೋವಿಡ್ ಮೂರನೇ ಅಲೆಯ ಆರಂಭದ ಹಂತದಲ್ಲಿದ್ದೇವೆ. ಸಾಮಾಜಿಕ ಅಂತರದ ಜೊತೆಗೆ ಆರೋಗ್ಯದ ಕಾಳಜಿಯನ್ನು ಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ನರಸಪ್ಪ ತಶೀಲ್ದಾರ್ ತಾಕೀತು ಮಾಡಿದರು.


ಸ್ಥಳೀಯ ಬಸ್ಟಾಂಡ್ ಬಳಿಯ ಫುಟ್‍ಪಾತ್ ಅಂಗಡಿಗಳ ಬಳಿಗೆ ತೆರಳಿ ಪರಿಶೀಲನೆ ಮಾಡಿದ ಮುಖ್ಯಾಧಿಕಾರಿ, ವ್ಯಾಪಾರಿಗಳು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ವಾತಾವರಣ ಕಲುಶಿತಗೊಳಿಸಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೇ, ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ವಾಹನಗಳು ಪಟ್ಟಣದಲ್ಲಿ ಓಡಾಡುತ್ತಿರುತ್ತವೆ. ವಾಹನಗಳಲ್ಲಿರುವ ಪ್ರಯಾಣಿಕರು ಉಪಹಾರ ಸೇವಿಸಲು ಬರುತ್ತಾರೆ. ಬರುವವಿಗೆ ಕಡ್ಡಾಯವಾಗಿ ಸ್ಯಾನಿಟೈಜರ್ ಉಪಯೋಗಿಸುವ ಜೊತೆಗೆ ಸಾಮಾಜಿಕ ಅಂತರವಿಟ್ಟುಕೊಂಡು ವ್ಯಾಪಾರ ಮಾಡಬೇಕು. ಸಂಪೂರ್ಣವಾಗಿ ಕೊರೊನಾ ಮುಕ್ತವಾಗದ ಕಾರಣ ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದರು.


ಪುರಸಭೆ ಅದ್ಯಕ್ಷೆ ಗದ್ದೆಮ್ಮ ಯಮನೂರು, ಅಧಿಕಾರಿ ರಾಜಶೇಖರ ಪಾಟೀಲ್ ಸೇರಿ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!