ರಾಯಚೂರು

ರಾಜ್ಯದ ಮೊದಲ ಮಹಿಳಾ ಜಾನಪದ ಪರಿಷತ್ ಲಿಂಗಸುಗೂರಲ್ಲಿ ಉದ್ಘಾಟನೆ

ಲಿಂಗಸುಗೂರು : ನಾಡಿನ ಜಾನಪದ ಕಲೆ, ಸಂಸ್ಕøತಿ ಹಾಗೂ ಬುಡಕಟ್ಟು ಸಮುದಾಯದ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾನಪದ ಪರಿಷತ್‍ಅನ್ನು ಕಟ್ಟಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಆಧ್ಯತೆ ನೀಡುವ ಉದ್ದೇಶದಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಲಿಂಗಸುಗೂರು ತಾಲೂಕು ಮಹಿಳಾ ಜಾನಪದ ಪರಿಷತ್‍ಅನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.


ಸ್ಥಳೀಯ ವಿಸಿಬಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಿಳಾ ಜಾನಪದ ಪರಿಷತ್ ಉದ್ಘಾಟನೆ ಹಾಗೂ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಯೇ ನಮ್ಮ ಜಾನಪದ ಸಾಹಿತ್ಯದ ಬೇರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಬಾಯಿಂದ ಬಾಯಿಗೆ ಹಾಡುತ್ತಾ ಹೇಳಿಕೊಂಡು ಬಂದ ಸಾಹಿತ್ಯ ಜಾನಪದ ಕಲೆಯಾಗಿ ಉಳಿದುಕೊಂಡಿದೆ. ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗಿರುವ ಯುವ ಪೀಳಿಗೆ ನಮ್ಮ ಹಿರಿಯರ ಸಂಪ್ರದಾಯ, ಕಲೆ, ಸಾಹಿತ್ಯವನ್ನು ಮರೆಯುತ್ತಿದ್ದಾರೆ. ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜೊತೆಗೆ ಯುವ ಪೀಳಿಗೆಯನ್ನು ಜಾನಪದ ಸಾಹಿತ್ಯದತ್ತ ಒಲವು ತೋರುವ ಕಾರ್ಯಕ್ರಮಗಳನ್ನೂ ನಾವುಗಳನ್ನು ಹಮ್ಮಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಪರಿಷತ್ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯೋನ್ಮುಖರಾಗಬೇಕೆಂದು ಸೂಚನೆ ನೀಡಿದರು.


ಪರಿಷತ್ತಿನ ತಾಲೂಕು ಅದ್ಯಕ್ಷೆ ಮಂಜುಳಾ ಎಮ್. ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ, ರಾಜ್ಯ ಸಂಘ ನಮ್ಮ ಮೇಲೆ ಇಟ್ಟಂಥಹ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇವೆ. ನಮ್ಮ ತಾಲೂಕಿನಿಂದಲೇ ರಾಜ್ಯಾದ್ಯಂತ ಜಾನಪದ ಮಹಿಳೆಯರ ಕಹಳೆ ಮೊಳಗಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಹಿರಿಯರ ಸದಾಶಯದಂತೆ ಪರಿಷತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುತ್ತೇವೆಂದು ಭರವಸೆ ನೀಡಿದರು.


ಕಜಾಪ ಜಿಲ್ಲಾಧ್ಯಕ್ಷ ಶರಣಪ್ಪ ಗೋನಾಳ, ಮಹಿಳಾ ಪರಿಷತ್ತಿನ ಜಿಲ್ಲಾದ್ಯಕ್ಷೆ ದಾನಮ್ಮ, ಕಸಾಪ ಅದ್ಯಕ್ಷ ಪ್ರೊ.ಜಿ.ವಿ.ಕೆಂಚನಗುಡ್ಡ, ಕಜಾಪ ತಾಲೂಕು ಅದ್ಯಕ್ಷ ಮಂಜುನಾಥ ಕಾಮಿನ್, ವಿಸಿಬಿ ಕಾಲೆಜು ಪ್ರಾಚಾರ್ಯ ಡಾ.ಪಿ.ಜಗದೀಶ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!