ರಾಯಚೂರು

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ರಾಯಚೂರು,ಡಿ.೨೧:- ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಎಸ್.ಎಫ್.ಸಿ (ಮುಕ್ತ ನಿಧಿ) ಅನುದಾನಗಳ ಶೇ.೨೨ (ಎಸ್.ಸಿ.ಎಸ್.ಪಿ), ಶೇ೭ (ಟಿ.ಎಸ್.ಪಿ) ಹಾಗೂ ಶೇ.೫ರ ಅನುದಾನಗಳಡಿ ವೈಯ್ಯಕ್ತಿಕ ಚಟುವಟಿಕೆಗಳಡಿ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.


ಶೇ.೨೨ ಮತ್ತು ೭ ರ ಯೋಜನೆಯ ಎಸ್.ಎಫ್.ಸಿ (ಮು.ನಿ) ಅನುದಾನದ ಕ್ರಿಯಾಯೋಜನೆಯ ಚಟುವಟಿಕೆಗಳ ವಿವರ:
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ದುರಸ್ತಿಗಳ ಅವಶ್ಯಕತೆಗನುಗುಣವಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಧನ ಸಹಾಯ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಮತ್ತು ಡೇ-ನಲ್ಮ್ ಯೋಜನೆಯಡಿ ಉದ್ದಿಮೆದಾರರಿಗೆ ಸಾಲ ಮರುಪಾವತಿಗಾಗಿ ಸಹಾಯ ಧನ ನೀಡುವ ಕಾರ್ಯಕ್ರಮ ಇದಾಗಿದೆ.


ಪರಿಶಿಷ್ಟ ಜನಾಂಗದ ವೈಯಕ್ತಕ ಅಭ್ಯಾಸ ಪ್ರಾರಂಬಿಸಿರುವ ವೈದ್ಯರಿಗೆ ಸಲಕರಣೆಗಳ ಪಡೆದುಕೊಳ್ಳಲು ವೈದ್ಯಕೀಯ ಪದವಿಯಲ್ಲಿ ತೇರ್ಗಡೆಯಾದ ಅಲೋಪತಿ ವೈದ್ಯ/ಆರ್ಯುವೇದ ಹೋಮಿಯೋಪತಿ/ಯುನಾನಿಸಿದ್ದ ಮತ್ತು ನಿಸರ್ಗ ಚಿಕಿತ್ಸೆ/ಯೋಗ ಸ್ಥಿತಿ ಪ್ರಾರಂಭಿಸಲು ನೊಂದಾಯಿಸಿಕೊಂಡ ಒಂದು ವರ್ಷದ ಒಳಗಾಗಿ ವೈದ್ಯಕೀಯ ಸಲಕರಣೆಗಳ ಪಡೆದುಕೊಳ್ಳಲು ಅವಶ್ಯವಿರುವ ವಾಸ್ತವಿಕ ವೆಚ್ಛ ಅಥವ ಗರಿಷ್ಟ ರೂ.೧.೫೦ ಲಕ್ಷಗಳ ವರಗೆ ಯಾವುದೆ ಕಡಿಮೆಯೋ ಅಷ್ಟ ಮೊತ್ತ ಸಹಾಯಧನ ನೀಡುವುದು.


ಎಂ.ಬಿ.ಬಿ.ಎಸ್/ಬಿ.ಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಮಾತ್ರ ಡೇಸ್ಕ್ ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಖರೀದಿಗಾಗಿ ೫೦,೦೦೦ ರೂ.ಗಳು ಮೀರದಂತೆ ಪ್ರವೇಶದ ನಂತರ ಒಂದುಬಾರಿ ಮಾತ್ರ ಸಹಾಯಧನ ನೀಡುವುದು. ಎಂ.ಬಿ.ಬಿ.ಎಸ್/ಬಿ.ಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಮಾತ್ರ ಡೇಸ್ಕ್ ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಖರೀದಿಗಾಗಿ ೫೦,೦೦೦ ರೂ.ಗಳು ಮೀರದಂತೆ ಪ್ರವೇಶದ ನಂತರ ಒಂದುಬಾರಿ ಮಾತ್ರ ಸಹಾಯಧನ ನೀಡುವುದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಮತ್ತು ಡೇ-ನಲ್ಮ್ ಯೋಜನೆಯಡಿ ಉದ್ದಿಮೆದಾರರಿಗೆ ಸಾಲ ಮರುಪಾವತಿಗಾಗಿ ಸಹಾಯ ಧನ ನೀಡುವ ಕಾರ್ಯಕ್ರಮ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ರಿಪೇರಿಗಾಗಿ ಅವಶ್ಯಕತೆಗನುಗುಣವಾಗಿ, ಪರಿಶಿಷ್ಟ ಜಾತಿ ಜನಾಂಗಕ್ಕೆ ಧನ ಸಹಾಯ ನೀಡುವುದು.


ಶೇ.೫ರ ಯೋಜನೆಯ ಎಸ್.ಎಫ್.ಸಿ (ಮು.ನಿ) ಅನುದಾನದ ಕ್ರಿಯಾಯೋಜನೆಯ ಚಟುವಟಿಕೆಗಳ ವಿವರ:
ವಿಕಲಚೇತರಿಗೆ ಸಣ್ಣ ಉದ್ದಿಮೇದಾರರಿಗೆ ಸಹಾಯಧನ ಮತ್ತು ಡೇ-ನಲ್ಮ್ ಯೋಜನೆಯಡಿ ಉದ್ದಿಮೇದಾರರಿಗೆ ಸಾಲ ಮರುಪಾವತಿಗಾಗಿ ಸಹಾಯ ಧನ ನೀಡುವ ಕಾರ್ಯಕ್ರಮ.


ಪೂರ್ಣ ವಿವರದ ಪ್ರಕಟಣೆಯನ್ನು ನಗರಸಭೆ ಕಾರ್ಯಾಲಯ ನೋಟೀಸ್ ಫಲಕದಲ್ಲಿ ಲಗತ್ತಿಸಲಾಗಿದೆ, ಈ ಸಂಬಂಧ ವೆಬ್‌ಸೈಟ್ hಣಣಠಿ://ತಿತಿತಿ.siಟಿಜhಚಿಟಿuಡಿಛಿiಣಥಿ.mಡಿಛಿ.gov.iಟಿ/ ನಲ್ಲಿ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ವಿವರ ಪಡೆದುಕೊಳ್ಳಬಹುದು. ಪ್ರಯುಕ್ತ ಅರ್ಹ ಫಲಾನುಭವಿಗಳು ವೈಯ್ಯಕ್ತಿಕ ಚಟುವಟಿಕೆವಾರು ಅಗತ್ಯ ಎಲ್ಲಾ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳ ಧೃಢೀಕರಣದೊಂದಿಗೆ ೨೦೨೧ ಜನವರಿ ೨ರ ಸಂಜೆ ೫.೩೦ ರೊಳಗೆ ಅರ್ಜಿ ಸಲ್ಲಿಸಬೇಕು.


ಕೊನೆಯ ದಿನಾಂಕ ಮೀರಿ ಬಂದಂತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಹಿಂದೆ ಯೋಜನೆಯಲ್ಲಿ ಸೌಲಭ್ಯಪಡೆದಂತವರಿಗೆ ಈ ಯೋಜನೆಗಳಲ್ಲಿ ಪುನಃ ಸೌಲಭ್ಯ ನೀಡಲಾಗುವುದಿಲ್ಲ. ಪ್ರಕಟಣೆಯಲ್ಲಿನ ಪ್ರಚುರಪಡಿಸಲಾದ ವೈಯ್ಯಕ್ತಿಕ ಚಟುವಟಿಕೆಗಳ ಯೋಜನೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕೆಂದು ಸಿಂಧನೂರು ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಸಿಂಧನೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!