ರಾಯಚೂರು

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‍ರ ಪರಿನಿರ್ವಾಣ ದಿನಾಚರಣೆ

ಲಿಂಗಸುಗೂರು : ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್‍ರ 64ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಮೇಣದಬತ್ತಿ ಹಚ್ಚಿ ಆಚರಣೆ ಮಾಡಲಾಯಿತು.


ತಾಲೂಕಿನ ಈಚನಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜಸೇವಕ ಶರಣಬಸವ ಹಡಪದ್, ಬಾಬಾಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅವರೊಂದು ಜಾತ್ಯಾತೀತ ಶಕ್ತಿ. ಶಿಕ್ಷಣದಿಂದ ಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯವೇ ಹೊರತು ಸಿರಿವಂತಿಕೆಯಿಂದಲ್ಲ ಎಂದು ಜಗತ್ತಿಗೆ ಸಾರಿ ತೋರಿಸಿಕೊಟ್ಟವರು ಅವರು. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ ಎಂದು ಕಲಿಸಿಕೊಟ್ಟವರಾಗಿದ್ದಾರೆ ಎಂದು ಹೇಳಿದರು.


ಜಿ.ಪರಮೇಶ್ವರ ಯುವ ಸೈನ್ಯದ ಜಿಲ್ಲಾದ್ಯಕ್ಷ ಮಲ್ಲರಡ್ಡೆಪ್ಪ ದೊಡ್ಡಮನಿ, ಆದಪ್ಪ ಎನ್.ಮೇಟಿ, ಯಮನಪ್ಪ ಕಟ್ಟಿಮನಿ, ನಾಗಪ್ಪ ಸಾಲ್ಮನಿ, ಸಣ್ಣ ಗದ್ದೆಪ್ಪ ಹಳ್ಳಿ, ರಮೇಶ ಚಿಗರಿ, ಸಹದೇವಪ್ಪ ಕರಡಿ, ಅಮರೇಶ ಗಾಳಿಪೂಜಿ, ಶ್ರವಣಕುಮಾರ ದಾಸರ್, ಅಮರೇಶ ಛಲವಾದಿ, ಹುಲುಗಪ್ಪ ಕಟ್ಟಿಮನಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!