ನರೇಗಾ ಕೂಲಿ ನೀಡದ ಪಿಡಿಓ : ಕ್ರಮಕ್ಕೆ ಒತ್ತಾಯ
ಲಿಂಗಸುಗೂರು : ಸಕಾಲಕ್ಕೆ ನರೇಗಾ ಕಾಯ್ದೆಯಂತೆ ಕೂಲಿ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಿದೇ ಬೇಜವಾಬ್ದಾರಿ ತೋರುತ್ತಿರುವ ತಾಲೂಕಿನ ಈಚನಾಳ ಗ್ರಾಮ ಪಂಚಾಯಿತಿ ಪಿಡಿಓರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಸಮಾಜಸೇವಕರಾದ ಶರಣಬಸವ, ಸಾದೇವಪ್ಪ ಒತ್ತಾಯಿಸಿದ್ದಾರೆ.
ತಾ.ಪಂ. ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಈಚನಾಳ ಗ್ರಾಮ ಪಂಚಾಯತ್ ಪಿಡಿಓ ಅವರು, ತಾಲೂಕಿನ ಹಲವು ಪಂಚಾಯಿತಿಗಳಲ್ಲಿ 14 ದಿನಗಳವರೆಗೆ ಕೆಲಸ ನೀಡಿದರೆ, ಇವರು 7 ದಿನಗಳು ಮಾತ್ರ ಕೆಲಸ ನೀಡುವುದಲ್ಲದೇ, ಉಳಿದ 20-25 ದಿನಗಳ ಕಾಲ ನರೇಗಾದ ಕೆಲಸ ನೀಡುವುದಿಲ್ಲ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದ 15 ದಿನಗಳ ಒಳಗೆ ಕಾರ್ಮಿಕರಿಗೆ ಕೆಲಸ ನೀಡಬೇಕೆನ್ನುವ ನಿಯಮವಿದ್ದಾಗ್ಯೂ, ಇಲ್ಲಿ ನಿಯಮಗಳು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
