ವಸತಿ ನಿಲಯಗಳಿಗೆ ಆಡಳಿತ ಸುಧಾರಣಾ ಸಮಿತಿ ಅದ್ಯಕ್ಷ ಭಾಸ್ಕರ್ ಭೇಟಿ : ಪರಿಶೀಲನೆ
ಲಿಂಗಸುಗೂರು : ಸಮಾಜಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಇಲಾಖೆಗಳಡಿ ನಡೆಯುತ್ತಿರುವ ತಾಲೂಕಿನ ವಿವಿಧ ವಸತಿ ನಿಲಯಗಳಿಗೆ ಸರಕಾರದ ಆಡಳಿತ ಸುಧಾರಣಾ ಸಮಿತಿ ಅದ್ಯಕ್ಷ ಟಿ.ಎಂ. ವಿಜಯ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು, ಸಮಿತಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಕೊಡುವ ಜೊತೆಗೆ ರಾಜ್ಯ ಸರಕಾರದ ಸೂಚನೆ ಮೇರೆಗೆ ಆರ್ಥಿಕ ನಷ್ಟ ಸರಿದೂಗಿಸಲು ಎಲ್ಲಾ ವಸತಿ ನಿಲಯಗಳನ್ನು ಒಂದೇ ಸೂರಿನಡಿ ತರಬೇಕೆಂಬ ಸರಕಾರದ ಮಟ್ಟದಲ್ಲಿನ ಚರ್ಚೆಯ ಬಗ್ಗೆ ತಿಳಿ ಹೇಳಿದರು. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ಹೆಚ್. ಸತೀಶ್, ಎಸ್‍ಟಿ ಜಿಲ್ಲಾ ಅಧಿಕಾರಿ ಚಿದಾನಂದ, ತಾಲೂಕು ಅಧಿಕಾರಿಗಳಾದ ರವಿ ಎಂ, ಷಡಕ್ಷರಿ, ವಾರ್ಡನ್‍ಗಳಾದ ರವಿಕುಮಾರ, ಸಿದ್ಧಾರ್ಥ, ಶರಣಬಸವ, ಶರಣಪ್ಪ ಕುಷ್ಟಗಿ, ಭೀಮಣ್ಣ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.
