ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, 500 ಕೋಟಿ ರೂ. ಅನುದಾನಕ್ಕೆ ಆಗ್ರಹ
ಲಿಂಗಸುಗೂರು : ರಾಜ್ಯದಲ್ಲಿ ಹಿಂದುಳಿದಿರುವ ಈಡಿಗ ಸಮಾಜದ ಅಭಿವೃದ್ಧಿಗೆ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಜೊತೆಗೆ 500 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಈಡಿಗ ಸಮಾಜದ ಭೂರಹಿತರಿಗೆ ಸರಕಾರಿ ಜಮೀನು ಮಂಜೂರು ಮಾಡಬೇಕು. ಮನೆ ರಹಿತರಿಗೆ ಹಕ್ಕುಪತ್ರ ನೀಡುವ ಜೊತೆಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಕುಲಕಸುಬಾದ ಈಚಲು ಮರದ ಸೆಂದಿ ಇಳಿಸಲು ಮತ್ತು ಮಾರಾಟ ಮಾಡಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಶೈಕ್ಷಣಿಕ ಮತ್ತು ಉದ್ಯೋಗ ದೃಷ್ಠಿಯಿಂದ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕು. ರಾಜಕೀಯವಾಗಿ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಅದ್ಯಕ್ಷ ವೀರಭದ್ರಯ್ಯ ಆರ್.ಗುತ್ತೇದಾರ, ಸಮಾಜದ ಮುಖಂಡರಾದ ವೆಂಕಟೇಶಪ್ಪ ಗುತ್ತೆದಾರ, ಸೋಮಲಿಂಗಪ್ಪ ಗುತ್ತೆದಾರ, ಬಸವರಾಜ, ಶಿವಯ್ಯ, ಶಂಕ್ರಪ್ಪ, ದೇವೆಂದ್ರಪ್ಪ, ರಮೇಶ ಬಗ್ಲಿಮನಿ, ಶೇಖರಪ್ಪ ಗುತ್ತೆದಾರ, ರಾಜು, ಗದ್ದೆಪ್ಪಯ್ಯ, ಕುಪ್ಪಯ್ಯ, ರಮೇಶ ಸೇರಿ ಇತರರು ಭಾಗವಹಿಸಿದ್ದರು.

