ಲಿಂಗಸುಗೂರು : ವಿಕಲಚೇತನರಿಗೆ, ಮಂಗಳಮುಖಿಯರಿಗೆ ಫುಡ್‍ಕಿಟ್ ವಿತರಣೆ
ಲಿಂಗಸುಗೂರು : ಸ್ಥಳೀಯ ಕರ್ನಾಟಕ ರಾಜ್ಯ ಅಂಗವಿಕರದ ಆರ್‍ಪಿಡಿ ಟಾಸ್ಕ್‍ಫೋರ್ಸ್ ಸಮಿತಿ ಹಾಗೂ ಚೇತನ ಅಂಗವಿಕರ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಕಲಚೇತನರು ಹಾಗೂ ಮಂಗಳಮುಖಿಯರಿಗೆ ಫುಡ್‍ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಸ್ಥಿತಿವಂತ ವಿಕಲಚೇತನರು ನೀಡಿದ ಆರ್ಥಿಕ ನೆರವಿನಿಂದ ಬಡ ಅಂಗವಿಕಲರಿಗೆ ದಿನಸಿಕಿಟ್‍ಗಳನ್ನು ನೀಡುವ ಮೂಲಕ ಅಗತ್ಯ ಇರುವವರಿಗೆ ಸಹಾಯ ಮಾಡಲಾಯಿತು.
ಆರ್‍ಪಿಡಿ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಅಸ್ಕಿಹಾಳ ನಾಗರಾಜ, ಕರವೇ ಅದ್ಯಕ್ಷ ಆಂಜನೇಯ ಭಂಡಾರಿ, ಚೇತನ ಸಂಸ್ಥೆಯ ಅದ್ಯಕ್ಷ ಹುಸೇನ್‍ಬಾಷಾ ಬನ್ನಿಗೋಳ, ಪವಾಡೆಮ್ಮ, ಸುಂಕಲಮ್ಮ, ಅಜ್ಮೀರಸಾಬ, ಭರಮಪ್ಪ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

