ಗುರುಗುಂಟಾ ಗ್ರಾ.ಪಂ. ಅದ್ಯಕ್ಷ-ಉಪಾದ್ಯಕ್ಷರ ಅವಿರೋಧ ಆಯ್ಕೆ ಅದ್ಯಕ್ಷರಾಗಿ ರಮೇಶ, ಉಪಾದ್ಯಕ್ಷರಾಗಿ ಪುಷ್ಪಾ
ಲಿಂಗಸುಗೂರು : 33 ಸದಸ್ಯರನ್ನು ಒಳಗೊಂಡ ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಗುರುಗುಂಟಾ ಪಂಚಾಯಿತಿಗೆ ಶುಕ್ರವಾರ ಅದ್ಯಕ್ಷ-ಉಪಾದ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು. ಸರ್ವ ಸದಸ್ಯರ ಒಮ್ಮತದ ಮೇರೆಗೆ ಅದ್ಯಕ್ಷರಾಗಿ ರಮೇಶ ಭೋವಿ, ಉಪಾದ್ಯಕ್ಷರಾಗಿ ಪುಷ್ಪಾ ಚನ್ನಬಸಯ್ಯಸ್ವಾಮಿ ಅವರುಗಳು ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅದ್ಯಕ್ಷ-ಉಪಾದ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ರಮೇಶ ಮತ್ತು ಪುಷ್ಪಾ ಚನ್ನಬಸಯ್ಯಸ್ವಾಮಿ ಅವರುಗಳನ್ನು ಅವಿರೋಧವಾಗಿ ಅದ್ಯಕ್ಷ-ಉಪಾದ್ಯಕ್ಷರೆಂದು ಚುನಾವಣಾಧಿಕಾರಿ ಶಂಕರಪ್ಪ ಚಂಡಿವಡ್ಡರ್ ಘೋಷಣೆ ಮಾಡಿದರು.
ಗುರುಗುಂಟ ಸಂಸ್ಥಾನಿಕರು, ಯುವಕರ ಮಾರ್ಗದರ್ಶಕ ರಾಜಾ ಸೋಮನಾಥ ನಾಯಕ, ಪಂಚಾಯಿತಿ ಸದಸ್ಯರಾದ ರಾಣಿ ತಾರಾದೇವಿ, ರಜಿಯಾಬೇಗಂ, ವಾಸುದೇವ ನಾಯಕ, ರಾಕೇಶ, ಬಾಬುಸಾಬ, ಮಕ್ತುಂಬಿ ಬೇಗಂ, ಅಮರ ನಾಯಕ, ಜಿ.ಆರ್.ಶರಣಬಸವ, ವಿಜಯಲಕ್ಷ್ಮಿ, ಕವಿತಾ, ಚಂದ್ರಶೇಖರ ನಾಯಕ, ಮೂರ್ತಿ, ಯಂಕಮ್ಮ ಸೇರಿ ಸರ್ವ ಸದಸ್ಯರು, ಪಿಡಿಒ ಪ್ರವೀಣಕುಮಾರ ಸೇರಿ ಅದ್ಯಕ್ಷ-ಉಪಾದ್ಯಕ್ಷರಿಗೆ ಗ್ರಾಮದ ಮುಖಂಡರು, ಸ್ನೇಹಿತರು, ಹಿತೈಶಿಗಳು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅದ್ಯಕ್ಷ ರಮೇಶ, ಸಂಸ್ಥಾನಿಕರು, ಮಾರ್ಗದರ್ಶಕರೂ ಆಗಿರುವ ರಾಜಣ್ಣನವರ ಸಲಹೆ ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಗುರುಗುಂಟ ಅಭಿವೃದ್ಧಿಗೆ ಶ್ರಮಿಸಲಾಗುವುದು. ಉದ್ಯೋಗ ಖಾತ್ರಿ ಸೇರಿ ಸರಕಾರದಿಂದ ಬರುವ ಯೋಜನೆಗಳು ಹಾಗೂ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸಲು ಶ್ರಮಿಸಲಾಗುವುದು ಎಂದು ಹೇಳಿದರು. ಅದ್ಯಕ್ಷರ ಆಯ್ಕೆಗೆ ಕಾರಣರಾದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

