ರಾಯಚೂರು

ಗತ್ತು ಚಲನಚಿತ್ರ ಬಿಡುಗಡೆ : ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಲು ಶ್ರೀಗಳ ಕರೆ

ಲಿಂಗಸುಗೂರು : ಚಿತ್ರೋದ್ಯಮದಲ್ಲಿ ಉತ್ತರ ಕರ್ನಾಟಕ ಬಹಳಷ್ಟು ಹಿಂದುಳಿದಿದೆ. ಇದೊಂದು ದೊಡ್ಡ ಸಮಾಜ ಪರಿವರ್ತನಾ ಮಾಧ್ಯಮ. ಇದರಲ್ಲಿ ನಮ್ಮ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಕಲಾವಿದರು ದಕ್ಷಿಣ ಕರ್ನಾಟಕದ ಕಲಾವಿದರಂತೆ ಪ್ರಖ್ಯಾತಿಯಾಗಲು ನಮ್ಮ ಜನಗಳ ಸಹಕಾರ ಪ್ರೋತ್ಸಾಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಜನರು ಬೆಂಬಲ ನೀಡಬೇಕೆಂದು ವಿಜಯಮಹಾಂತೇಶ್ವರ ಶಾಖಾಮಠದ ಸಿದ್ದಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.


ಸ್ಥಳೀಯ ಎಂಪಾಯರ್ ಚಿತ್ರಮಂದಿರದಲ್ಲಿ ನಾಯಕ, ನಾಯಕಿ, ಬೆಂಬಲ ಕಲಾವಿದರು, ಸಹ ಕಲಾವಿದರು ಸೇರಿ ಬಹುತೇಕ ಸ್ಥಳೀಯರೇ ಹೆಚ್ಚಾಗಿ ನಟಿಸಿರುವ ಗತ್ತು ಕನ್ನಡ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಪ್ರತಿಭೆಗಳು ಇತ್ತೀಚೆಗೆ ಹೆಚ್ಚಾಗಿ ಹೊರಹೊಮ್ಮುತ್ತಿದ್ದು, ಸ್ಥಳೀಯ ಯುವಕ ಗೋವಿಂದ ರಾಠೋಡ್ ಅವರು ನಟಿಸಿರುವ ಗತ್ತು ಚಲನಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.
ಮುಖಂಡರಾದ ಶರಣಪ್ಪ ಮೇಟಿ, ಗಿರಿಮಲ್ಲನಗೌಡ, ಬಸನಗೌಡ ಮೇಟಿ, ಡಾ.ಶಿವಬಸಪ್ಪ ಹೆಸರೂರು, ಈಶ್ವರ ವಜ್ಜಲ್, ನಾರಾಯಣ ನಾಯ್ಕ, ನಾಗರೆಡ್ಡಿ ರಾಥೋಡ್, ಫೀರೋಜ್‍ಖಾನ್, ವಿರೇಶ ಹಿರೇಮಠ, ಮಹೆಬೂಬ, ಇಸ್ಮಾಯಿಲ್, ವೆಂಕಟೇಶ, ಹರಿಶ ಸೇರಿ ಹಲವರು ಈ ಸಂದರ್ಭದಲ್ಲಿ ಇದ್ದರು.


ಶುಕ್ರವಾರ ಬಿಡುಗಡೆಯಾಗಿರುವ ಗತ್ತು ಚಲನಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಪ್ರೇಮ ಕಥಾ ಹಂದರವನ್ನು ಒಳಗೊಂಡ ಚಲನಚಿತ್ರವನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಣೆ ಮಾಡುವಂತೆ ನಿರ್ಮಾಪಕ, ನಿರ್ದೇಶಕರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!