ವಿಜಯೇಂದ್ರರಿಗೆ ಭವ್ಯಸ್ವಾಗತ : ಜೆಸಿಬಿಗಳಿಂದ ಪುಷ್ಪಾಭಿಷೇಕ
ಲಿಂಗಸುಗೂರು : ಮಸ್ಕಿ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರಾರ್ಥವಾಗಿ ತೆರಳುತ್ತಿರುವ ಮಾರ್ಗಮಧ್ಯೆ ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಜೆಸಿಬಿ ಯಂತ್ರಗಳಿಂದ ಪುಷ್ಟಾಭಿಷೇಕ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಸ್ಥಳೀಯ ಬಸ್ಟಾಂಡ್ ವೃತ್ತದಲ್ಲಿ ತೆರೆದ ವಾಹನದಲ್ಲಿ ವಿಜಯೇಂದ್ರ ಆಗಮಿಸುತ್ತಿದ್ದಂತೆಯೇ ಎರಡು ಜೆಸಿಬಿ ಯಂತ್ರಗಳ ಬಕೆಟ್‍ಗಳಲ್ಲಿ ನಿಂತಿದ್ದ ಕಾರ್ಯಕರ್ತರು ಪುಷ್ಟಾಭಿಷೇಕ ಮಾಡಿದರು. ವಿಜಯೇಂದ್ರ ಹಾಗೂ ಮಾನಪ್ಪ ವಜ್ಜಲ್‍ರ ಪರವಾದ ಘೋಷಣೆಗಳನ್ನು ಕೂಗುತ್ತಾ,ಬೈಕ್ ರ್ಯಾಲಿ ಮೂಲಕ ಬಿಜೆಪಿ ಕಚೇರಿಗೆ ಕರೆತರಲಾಯಿತು.
ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ಅದ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ,ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಚೆನ್ನಬಸವ ಹಿರೇಮಠ, ರಮೇಶ ಕಟ್ಟಿಮನಿ
ಸೇರಿ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಇದ್ದರು.

