ಲಿಂಗಸುಗೂರು : ಪಿಕಾರ್ಡ್ ಬ್ಯಾಂಕ್ ಅದ್ಯಕ್ಷ- ಉಪಾದ್ಯಕ್ಷರ ಚುನಾವಣೆ ಅದ್ಯಕ್ಷರಾಗಿ ಮಹಾಂತೇಶ ಪಾಟೀಲ್, ಉಪಾದ್ಯಕ್ಷರಾಗಿ ಬಸ್ಸಮ್ಮ ಆಯ್ಕೆ
ಲಿಂಗಸುಗೂರು : ಸ್ಥಳೀಯ ತಾಲೂಕು ಪ್ರಾಥಮಿಕ ಸಹಕಾರಿ ಗ್ರಾಮೀಣ ಕೃಷಿ ಪತ್ತಿನ (ಪಿಕಾರ್ಡ್) ಬ್ಯಾಂಕ್ ಅದ್ಯಕ್ಷ-ಉಪಾದ್ಯಕ್ಷರ ಆಯ್ಕೆಗೆ ಮಂಗಳವಾರ ಚುನಾವಣೆಗಳು ಜರುಗಿದ್ದು, ಅದ್ಯಕ್ಷರಾಗಿ ಮಹಾಂತೇಶ ಪಾಟೀಲ್ ಮುದಗಲ್ ಹಾಗೂ ಉಪಾದ್ಯಕ್ಷರಾಗಿ ಬಸ್ಸಮ್ಮ ಸುಲ್ತಾನಪುರ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶೇಖಹುಸೇನ್ ಘೋಷಣೆ ಮಾಡಿದರು.
ಒಟ್ಟು 14 ಜನ ಚುನಾಯಿತ ಸದಸ್ಯರಿರುವ ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷದಿಂದ ಮಹಾಂತೇಶ ಪಾಟೀಲ್,ಬಿಜೆಪಿಯಿಂದ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ದರೆ, ಉಪಾದ್ಯಕ್ಷ ಸ್ಥಾನಕ್ಕೆ
ಕಾಂಗ್ರೆಸ್‍ನಿಂದ ಬಸ್ಸಮ್ಮ ಸುಲ್ತಾನಪುರ ಹಾಗೂ ಬಿಜೆಪಿಯಿಂದ ಶರಣಮ್ಮ ಗುಡದನಾಳ ನಾಮಪತ್ರ ಸಲ್ಲಿಸಿದ್ದರು. ವಿಜೇತರು 8 ಮತಗಳನ್ನು ಪಡೆದರೆ, ಪರಾಜಿತರು 6 ಮತಗಳನ್ನು ಪಡೆದುಕೊಂಡಿದ್ದಾರೆ. 2
ಮತಗಳ ಅಂತರದಿಂದ ಪಿಕಾರ್ಡ್ ಬ್ಯಾಂಕ್ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಕ್ಷದ ವಶವಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಯ
ಘೋಷಣೆಯಾಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರುಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಲಿಂಗಸುಗೂರು ಬ್ಲಾಕ್ ಅದ್ಯಕ್ಷ ಭೂಪನಗೌಡ ಕರಡಕಲ್, ಮುದಗಲ್ ಬ್ಲಾಕ್ ಅದ್ಯಕ್ಷ ದಾವೂದ್, ಮುಖಂಡರಾದ ಶರಣಪ್ಪ
ಮೇಟಿ, ಪಾಮಯ್ಯ ಮುರಾರಿ, ಬಸನಗೌಡ ಮೇಟಿ, ರುದ್ರಗೌಡ ತುರಡಗಿ,
ಚನ್ನವೀರಪ್ಪ ಪಾಗದ್, ನಾಗರೆಡ್ಡಿ, ಹನುಮಂತಪ್ಪ ಕಂದಗಲ್,
ಗುಂಡಪ್ಪ ನಾಯಕ, ಚೆನ್ನಾರೆಡ್ಡಿ, ಪರಶುರಾಮ ಸೇರಿ ಇತರರು
ಇದ್ದರು.

