ರಾಯಚೂರು

ಆನಾಹೊಸೂರು ತಾ.ಪಂ. ಕ್ಷೇತ್ರ ಪುನರ್ ವಿಂಗಡಣೆಗೆ ಒತ್ತಾಯ

ಲಿಂಗಸೂಗೂರು : ತಾಲೂಕಿನ ಆನಾಹೊಸೂರು ತಾಲೂಕು ಪಂಚಾಯತ್ ಕ್ಷೇತ್ರವನ್ನು ಜನಸಂಖ್ಯಾ ಆಧಾರದ ಮೇಲೆ ಪುನರ್ ವಿಂಗಡಣೆ ಮಾಡಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದರು.

ಸಹಾಯಕ ಆಯುಕ್ತರ ಕಚೇರಿ ಶಿರಸ್ತೆದಾರರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಆನಾಹೊಸೂರು ಗ್ರಾ.ಪಂ.ನಲ್ಲಿ 4480 ಜನಂಖ್ಯೆ,ರೋಡಲಬಂಡಾ(ಯುಕೆಪಿ) ಪಂಚಾಯತ್ ವ್ಯಾಪ್ತಿಯಲ್ಲಿ 6447 ಜನಸಂಖ್ಯೆ,ಚಿತ್ತಾಪೂರ ಪಂಚಾಯತ್ ವ್ಯಾಪ್ತಿಯಲ್ಲಿ 5398 ಸೇರಿ ಒಟ್ಟು ಆನಾಹೊಸೂರು ತಾ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ 16,325 ಜನಸಂಖ್ಯೆ ಇರುತ್ತದೆ. ತಾ.ಪಂ.ಕ್ಷೇತ್ರ ವ್ಯಾಪ್ತಿಗೆ ಅತಿಹೆಚ್ಚು ಜನಸಂಖ್ಯೆ ಇರುವುದರಿಂದ ಬದಲಾವಣೆ ಮಾಡಿ,ಆನಾಹೊಸೂರು ಹಾಗು ಈಚನಾಳ ಎರಡೂ ಪಂಚಾಯಿತಿಗಳನ್ನು ಸೇರಿ 11845 ಜನಸಂಖ್ಯೆ ಆಗುವುದರಿಂದ ಈ ಪ್ರದೇಶವನ್ನು ಒಂದು ತಾ.ಪಂ.ಕ್ಷೇತ್ರವನ್ನಾಗಿ ಮಾಡಬೇಕು.

ಈಚನಾಳ ತಾ.ಪಂ. ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಗೊರೆಬಾಳ ಗ್ರಾ.ಪಂ.ನಲ್ಲಿ 8412 ಜನಸಂಖ್ಯೆ ಇದೆ. ಇದನ್ನು ಒಂದು ತಾ.ಪಂ. ಕ್ಷೇತ್ರವನ್ನಾಗಿ ಮಾಡಲು ಸಾಧ್ಯತೆ ಇದೆ. ಈಗಾಗಲೇ ತಾಲೂಕಿನಲ್ಲಿ 8176 ಜನಸಂಖ್ಯೆ ಹೊಂದಿರುವ ಆಮದಿಹಾಳ, 8938 ಜನಸಂಖ್ಯೆ ಹೊಂದಿರುವ ಗುಂತಗೋಳ ಪ್ರದೇಶವನ್ನು ತಾ.ಪಂ. ಕ್ಷೇತ್ರಗಳಾಗಿವೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಗೊರೆಬಾಳ ಗ್ರಾ.ಪಂ. ಕ್ಷೇತ್ರವನ್ನೂ ಪ್ರತ್ಯೇಕವಾಗಿ ತಾ.ಪಂ. ಕ್ಷೇತ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಆದಿಲ್ ಜಹಾಗೀರದಾರ್, ಸಂಗಪ್ಪ ಟಿ.ಭಾವಿಮನಿ, ಬಸವರಾಜ,ರಮೇಶ ತೊಗರಿ ರಾಯಪ್ಪ, ಗದ್ದೆಪ್ಪ ಜಾಗೀರನಂದಿಹಾಳ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!