ಲಿಂಗಸುಗೂರು : ಅಬಕಾರಿ ದಾಳಿ ಇಬ್ಬರು ಆರೋಪಿಗಳು ಸೇರಿ 1,630 ಲೀಟರ್ ಬೆಲ್ಲದ ಕೊಳೆ 45 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ
ಲಿಂಗಸುಗೂರು : ತಾಲೂಕಿನ ಗೊರೆಬಾಳ ತಾಂಡಾದ ಜಮೀನೊಂದರಲ್ಲಿ ಅಕ್ರಮವಾಗಿ ತಯಾರಿಸುತ್ತಿದ್ದ ಬಟ್ಟಿ ಸಾರಾಯಿ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಪೊಲೀಸರು 1,630 ಲೀಟರ್ ಬೆಲ್ಲದ ಕೊಳೆ, 45 ಲೀಟರ್ ಬಟ್ಟಿ ಸಾರಾಯಿ, ಇಬ್ಬರು ಆರೋಪಿಗಳು ಹಾಗೂ ಒಂದು ದ್ವಿಚಕ್ರವಾಹನವನ್ನು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಲಕ್ಷ್ಮಿ ನಾಯಕ್ ತಿಳಿಸಿದರು.
ಸ್ಥಳೀಯ ಅಬಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಖಚಿತ ಮಾಹಿತಿ ಮೇರೆಗೆ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಅಬಕಾರಿ ನಿರೀಕ್ಷಕಿ ಸರಸ್ವತಿ ನೇತೃತ್ವದಲ್ಲಿ ಸ್ಥಳಕ್ಕೆ ದಾಳಿ ನಡೆಸಿ 12 ಬ್ಯಾರಲ್ ಗಳಲ್ಲಿ 1500 ಲೀಟರ್ ಬೆಲ್ಲದ ಕೊಳೆ 13 ಕೊಡಗಳಲ್ಲಿ 130 ಲೀಟರ್ ಬೆಲ್ಲದ ಕೊಳೆ ಸೇರಿ ಒಟ್ಟು 1630 ಬೆಲ್ಲದ ಕೊಳೆ. ಎರಡು ಕ್ಯಾನ್ ಗಳಲ್ಲಿ 30 ಲೀಟರ್ ಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ 15 ಲೀಟರ್ ಬಟ್ಟಿ ಸಾರಾಯಿ ಯನ್ನು ಹಾಗೂ ದ್ವಿಚಕ್ರವಾಹನವನ್ನು ಜಪ್ತಿ ಮಾಡಲಾಗಿದೆ.
ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಕುಮಾರ್ ಹಾಗೂ ಕೂಪಣ್ಣ ಗೊರೆಬಾಳ ತಾಂಡಾ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ತಾಲೂಕು ಹಾಗೂ ಜಿಲ್ಲೆಯ ಯಾವುದೇ ಬಾರ್ ಶಾಪ್, ವೈನ್ ಶಾಪ್ ಗಳಲ್ಲಿ ಕಲಬೆರಕೆ ಸಾರಾಯಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ ಸಿಬ್ಬಂದಿ ಗಳು ಈ ಸಂದರ್ಭದಲ್ಲಿ ಇದ್ದರು.

