ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ : ಹೆಚ್ಚುವರಿ ಅನುದಾನಕ್ಕೆ ಆಗ್ರಹ
ಲಿಂಗಸುಗೂರು : ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.
ಶಿರಸ್ತೆದಾರ ಶಾಲಂಸಾಬ್‍ರ ಮೂಲಕ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮನವಿ ರವಾಸಿದ ಪ್ರತಿಭಟನಾಕಾರರು, ಮೀಸಲು ಕ್ಷೇತ್ರ ಲಿಂಗಸುಗೂರು ಪಟ್ಟಣದಲ್ಲಿ ಆರಂಭದಿಂದಲೂ ಅಂಬೇಡ್ಕರ್ ಭವನ ಇಲ್ಲ. 2012-13ನೇ ಸಾಲಿನಲ್ಲಿ 50 ಲಕ್ಷ ರೂಪಾಯಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾಗಿರುತ್ತದೆ. ಕಾಮಗಾರಿಗೆ ಅಗತ್ಯ ಸ್ಥಳವಿದ್ದು, ಅನುದಾನ ಸಾಲುವುದಿಲ್ಲ. ಕಾರಣ ಹೆಚ್ಚುವರಿಯಾಗಿ 2 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ಸುಸಜ್ಜಿತ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಸಂಘಟನಾ ಸಂಚಾಲಕ ಯಂಕಪ್ಪ ಚಿತ್ತಾಪೂರ, ತಾಲೂಕು ಸಂಘಟನಾ ಸಂಚಾಲಕ ಯಮನಪ್ಪ ಸರ್ಜಾಪೂರ, ಶ್ರೀಕಾಂತ, ಪ್ರಕಾಶ, ಉದಯಕುಮಾರ, ಬಸಣ್ಣ ಸೇರಿ ಇತರರು ಇದ್ದರು.

