ಲಿಂಗಸುಗೂರು : ಗ್ರಾ.ಪಂ. ನೌಕರರ ಜಿಲ್ಲಾ ಸಮ್ಮೇಳನ
ಲಿಂಗಸುಗೂರು : ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಮಟ್ಟದ 9ನೇ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಜೆ.ರಾಮಕೃಷ್ಣ ಸಮ್ಮೇಳನವನ್ನು ಉದ್ಘಾಟಿಸಿ, ರಾಜ್ಯ ಸರಕಾರವು ಪಂಚಾಯತ್ ನೌಕರರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಸಣ್ಣ ನೌಕರರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಈ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪಂಚಾಯತ್ ನೌಕರರ ಬದುಕಿಗೆ ಸಹಕಾರಿಯಾಗಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾದ್ಯಕ್ಷ ಅಮರೇಶ ಕನ್ನಾಳ ಅದ್ಯಕ್ಷತೆ ವಹಿಸಿದ್ದರು. ರಾಜ್ಯ ಖಜಾಂಚಿ ಬಸವರಾಜ, ಜಿಲ್ಲಾ ಪ್ರಧಾನಕಾರ್ಯದರ್ಶಿ ಶರಣಬಸವ, ಮಹಾದೇಶವಪ್ಪ ಜಂಬಲದಿನ್ನಿ, ಗಿರಿಯಪ್ಪ, ಮಹ್ಮದ್ ಹನೀಫ್, ಸದ್ದಾಂಹುಸೇನ್, ಶಿವಾರೆಡ್ಡಿ, ವಿರೇಶ, ಮೌನೇಶ, ಯಮನೂರಪ್ಪ ಸೇರಿ ಇತರರು ಇದ್ದರು.

