ಶಿಕ್ಷಕ ಹುಲ್ಲಪ್ಪ ವನಕಿಹಾಳರಿಗೆ ಅಥಣೀಶ ಅಂಕಿತ ಪ್ರಶಸ್ತಿ
ಲಿಂಗಸುಗೂರು : ತಾಲೂಕಿನ ಈಚನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲ್ಲಪ್ಪ ವನಕಿಹಾಳರಿಗೆ ಅಥಣಿಯ ಮೋಟಗಿ ಶ್ರೀಮಠದ ಶ್ರೀಪ್ರಭು ಚೆನ್ನಬಸವ ಸ್ವಾಮಿಯವರ ನೇತೃತ್ವದಲ್ಲಿ ನಡೆದ ಶರಣ ಸಂಸ್ಕøತಿ ಸಮ್ಮೇಳನದಲ್ಲಿ ಅಥಣೀಶ ಅಂಕಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಕೊಡಮಾಡುತ್ತಿರುವ ಈ ಪ್ರಶಸ್ತಿಗೆ ಭಾಜನರಾಗಿರುವ ಹುಲ್ಲಪ್ಪರಿಗೆ ಸಂಸ್ಥೆಯಿಂದ 10 ಸಾವಿರ ರೂಪಾಯಿ, 5 ಸಾವಿರ ರೂಪಾಯಿ ಬೆಲೆಬಾಳುವ ಪುಸ್ತಕಗಳನ್ನು ಕೊಟ್ಟು ಗೌರವಿಸಲಾಯಿತು.
ಹುಲ್ಲಪ್ಪ ಅವರು ತಮ್ಮ ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆತು ಪರಿಸರದ ಬಗ್ಗೆ ತೋರಿರುವ ಕಾಳಜಿಗೆ ಶಿಕ್ಷಣ ಇಲಾಖೆಯಿಂದ ಉತ್ತಮ ಪರಿಸರ ಮಿತ್ರ ಶಾಲೆ ಎಂದು ಪ್ರಶಸ್ತಿ ಪಡೆದಿದ್ದಲ್ಲದೇ, ಕಳೆದ ಬಾರಿ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ದೈಹಿಕವಾಗಿ ಅಂಗವಿಕಲರಾಗಿದ್ದರೂ, ಶೈಕ್ಷಣಿಕ ಕಾರ್ಯದಲ್ಲಿ ಮಾತ್ರ ಯಾರಿಗೂ ಕಮ್ಮಿ ಇಲ್ಲದಂತೆ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಹುಲ್ಲಪ್ಪ ವನಕಿಹಾಳ ತಮ್ಮನ್ನು ಸರಸ್ವತಿಯ ಸೇವೆಗೆ ಅರ್ಪಿಸಿಕೊಂಡಿದ್ದಾರೆ.

