ಲಿಂಗಸುಗೂರು ಸಿಪಿಐ ಕಚೇರಿಗೆ ಎಸ್ಪಿ ಭೇಟಿ : ಶ್ಲಾಘನೆ
ಲಿಂಗಸುಗೂರು : ಸ್ಥಳೀಯ ಸಿಪಿಐ ಕಚೇರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಮ್ ಭೇಟಿ ನೀಡಿ, ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಬಸ್ಟಾಂಡ್ ವೃತ್ತ, ಗಡಿಯಾರ ಚೌಕ್ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ ವೃತ್ತ ನಿರೀಕ್ಷಕ ಮಹಾಂತೇಶ್ ಸಜ್ಜನ್ ಅವರ ಕಾರ್ಯವನ್ನು ಶ್ಲಾಘಿಸಿದರು.
ಸಿಪಿಐ ಸಜ್ಜನ್ ಅವರು ಲಿಂಗಸುಗೂರು ಠಾಣೆಗೆ ಬಂದಾಗಿನಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತದೇಕಚಿತ್ತದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ನಡೆಯುವ ಜನರ ಚಲನವಲನಗಳ ವೀಕ್ಷಣೆ ಕಚೇರಿಯಲ್ಲಿ ಕುಳಿತು ಮಾಡಬಹುದಾಗಿದೆ. ಇದರಿಂದ ಕಾನೂನು ಪಾಲನೆಗೆ ಸಹಕಾರಿಯಾಗುವುದಲ್ಲದೆ, ಸಮಾಜಘಾತುಕ ಕಿಡಿಗೇಡಿಗಳ ನಿಯಂತ್ರಣ ಸಾಧ್ಯವಾಗಲಿದೆ. ಸಿಪಿಐ ಸಜ್ಜನ್ ಅವರ ಕಾರ್ಯ ಜಿಲ್ಲೆಯ ಇತರ ಠಾಣೆಗಳಿಗೂ ಮಾದರಿಯಾಗಿದೆ ಎಂದು ಎಸ್ಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ಪ್ರಕಾಶ್ ಡಂಬಳ ಸೇರಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.

