ರಾಯಚೂರು

ಬಿಜೆಪಿ ಸಂಸ್ಥಾಪಕ ಪಂ.ದೀನ್‍ದಯಾಳ್‍ರ ಸ್ಮರಣೆ

ಲಿಂಗಸುಗೂರು : ಭಾರತೀಯ ಜನತಾ ಪಕ್ಷ ಕಟ್ಟಿದ ಸಂಸ್ಥಾಪಕರಲ್ಲೊಬ್ಬರಾದ ಪಂ.ದೀನ್‍ದಯಾಳ್ ಅವರ ಸ್ಮರಣಾರ್ಥ ಸಮರ್ಪಣಾ ದಿನವನ್ನು ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.


ಪಂಡಿತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರ ಜೀವನ ಚರಿತ್ರೆ ಹಾಗೂ ಭಾವೈಕ್ಯತೆಯ ತತ್ವ ಸಿದ್ಧಾಂತಗಳ ಬಗ್ಗೆ ಮುಖಂಡ ಜಗನ್ನಾಥ ಕುಲಕರ್ಣಿ ಮಾತನಾಡಿದರು.


ಪಕ್ಷ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಪ್ರಭುಸ್ವಾಮಿ ಅತ್ತನೂರ, ಅಮರೇಶ ಮಡ್ಡಿ, ಮಹಿಳಾ ಘಟಕದ ಕಾರ್ಯದರ್ಶಿ ಶ್ವೇತಾ ಲಾಲಗುಂದಿ, ಜಯಶ್ರೀ, ಪರಮೇಶ ಯಾದವ್, ಮಹಾಂತೇಶ, ಬಸವರಾಜ ಗುತ್ತೇದಾರ, ಹುಲುಗಪ್ಪ ಪೈದೊಡ್ಡಿ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!