ಲಿಂಗಸುಗೂರಲ್ಲಿ ಫೆ.13ಕ್ಕೆ ‘ಜಿಲ್ಲೆಯ ಆಧುನಿಕ ಸಾಹಿತ್ಯ’ ವಿಚಾರ ಸಂಕಿರಣ
ಲಿಂಗಸುಗೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಪಟ್ಟಣದ ವಿಸಿಬಿ ಮಹಾವಿದ್ಯಾಲಯದಲ್ಲಿ ಫೆ.13ಕ್ಕೆ ರಾಯಚೂರು ಜಿಲ್ಲೆಯ ಆಧುನಿಕ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಕಸಾಪ ಅದ್ಯಕ್ಷ ಪ್ರೊ.ಜಿ.ವಿ. ಕೆಂಚನಗುಡ್ಡ ಹೇಳಿದರು.
ನಾಳೆ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗುವ ಸಂಕಿರಣವನ್ನು ಖ್ಯಾತ ಸಾಹಿತಿ ಡಾ.ಬಸವರಾಜ ಸಬರದ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು ಅವರು ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಜಿಲ್ಲೆ ಹಾಗೂ ತಾಲೂಕಿನ ಖ್ಯಾತ ಸಾಹಿತಿಗಳು, ಬರಹಗಾರರು ಪಾಲ್ಗೊಳ್ಳಲಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಕಸಾಪ ಪ್ರಧಾನ ಕಾರ್ಯದರ್ಶಿ ದುರ್ಗಾಸಿಂಗ್ ರಜಪೂತ್, ಪದಾಧಿಕಾರಿಗಳಾದ ಪ್ರೋ.ವೈವೈ ಈಳಿಗೇರ್, ಪ್ರೊ. ಚಂದ್ರಶೇಖರ ಪಾಟೀಲ್, ಪ್ರೋ.ಜಗದೀಶ ಸೇರಿ ಇತರರು ಇದ್ದರು.

