ರಾಯಚೂರು

ಮತ ಏಣಿಕೆ: ಅಭ್ಯರ್ಥಿಗಳು, ಏಜೆಂಟರ್ ನಿಯಮಗಳನ್ನು ಪಾಲಿಸಲು ತಹಶೀಲ್ದಾರ ಸೂಚನೆ


ರಾಯಚೂರು,ಡಿ.೨೯:- ರಾಯಚೂರು ತಾಲೂಕಿನ ೩೩ ಗ್ರಾಮ ಪಂಚಾಯತಿಗಳ ಮತ ಏಣಿಕೆಯು ಡಿ.೩೦ರ ಬೆಳಿಗ್ಗೆ ೮ ಗಂಟೆಗೆ ನಗರದ ಎಸ್.ಆರ್.ಪಿಯು ಕಾಲೇಜಿನಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು, ಏಜೆಂಟರು ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ತಿಳಿಸಿದ್ದಾರೆ.


ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಅಥವಾ ಮತ ಎಣಿಕೆ ಏಜೆಂಟರ ಪೈಕಿ ಒಬ್ಬರಿಗೆ ಮಾತ್ರ ಏಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶವಿದೆ. ಮತ ಎಣಿಕೆಗಾಗಿ ಪ್ರತಿ ಟೆಬಲ್‌ಗೆ ಒಬ್ಬ ಮೇಲ್ವಿಚಾರಕರು ಹಾಗೂ ಇಬ್ಬರು ಎಣಿಕೆ ಸಹಾಯಕರುನ್ನು ಒಳಗೊಂಡಂತೆ ಒಟ್ಟು ೧೦೨ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆಗೆ ಆಗಮಿಸಿದ ಅಭ್ಯರ್ಥಿ, ಮತ ಎಣಿಕೆ ಏಜೆಂಟ್ ರವರು ತಮಗೆ ಸಂಬಂಧಿಸಿದ ಕ್ಷೇತ್ರದ ಎಣಿಕೆ ನಡೆಯವ ಟೇಬಲ್‌ಗಳಲ್ಲಿ ಏಣಿಕೆ ಸಮಯದಲ್ಲಿ ಹಾಜರಿರುವ ಹಾಗೂ ತಮ್ಮಗೆ ಸಂಬಂಧಿಸಿದ ಕ್ಷೇತ್ರದ ಮತ ಏಣಿಕೆ ಮುಕ್ತಾಯದ ನಂತರ ಎಣಿಕೆ ಕೇಂದ್ರದಿಂದ ತೆರಳಬೇಕು ಎಂದವರು ಹೇಳಿದ್ದಾರೆ.


ಮತ ಏಣಿಕೆ ಕೇಂದ್ರದಲ್ಲಿ ಮಾದಕ ವಸ್ತುಗಳು ಮತ್ತು ಮೊಬೈಲ್ ರಿಕಾರ್ಡರ್‌ಗೆ ಅವಕಾಶವಿಲ್ಲ. ಅಲ್ಲದೇ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನ ತರುವುದನ್ನು ನಿರ್ಬಂಧಿಸಲಾಗಿದೆ, ಮತ ಏಣಿಕೆ ಕೇಂದ್ರದ ಬ್ಯಾರಿಕೇಡ್ ಒಳಗಡೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳ ವಾಹನಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಮತ ಎಣಿಕೆ ಕೊಠಡಿಯಲ್ಲಿ ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸಬೇಕು. ಅದನ್ನು ಉಲ್ಲಂಘಿಸಿದ್ದಲ್ಲೀ ಯಾವುದೇ ರೀತಿಯ ಸೂಚನೆ ನೀಡದೇ ಅವರನ್ನು ಕೊಠಡಿಯಿಂದ ಹೊರ ಹಾಕಲಾಗುವುದು ಹಾಗೂ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!