ಬಸ್ಟಾಂಡ್‍ನಲ್ಲಿ ಸಸಿ ನೆಟ್ಟ ‘ಹಸಿರು ಲಿಂಗಸುಗೂರು’ ಸಮಿತಿ
ಲಿಂಗಸುಗೂರು : ಸ್ಥಳೀಯ ಬಸ್ ನಿಲ್ದಾಣದಲ್ಲಿ ಹಸಿರು ಲಿಂಗಸುಗೂರು ಸಮಿತಿ ಪದಾಧಿಕಾರಿಗಳು ಸಸಿಗಳನ್ನು ನೆಡುವ ಮೂಲಕ ಹಸಿರೀಕರಣಕ್ಕೆ ಮುಂದಾದರು.
ಸಮಿತಿಯಿಂದ ಸಸಿ ನೆಡುವ ಕಾರ್ಯಕ್ರಮದ ಮೊದಲ ಭಾನುವಾರ ಇದಾಗಿದ್ದು, ಪ್ರತಿ ಭಾನುವಾರ ಹಸಿರೀಕರಣಕ್ಕಾಗಿ ಸಸಿಗಳನ್ನು ನೆಡಲಾಗುವುದು. ಸ್ವಚ್ಛವಾದ ವಾತಾವರಣ, ಶುದ್ಧ ಗಾಳಿ ಮನುಷ್ಯನ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರೂ ಹಸಿರೀಕರಣಕ್ಕೆ ಮುಂದಾಗುವ ಮೂಲಕ ಗಿಡ-ಮರಗಳನ್ನು ಬೆಳೆಸಬೇಕೆಂದು ಸಮಿತಿ ಸದಸ್ಯ ಭೀಮಸೇನ್ ಕುಲಕರ್ಣಿ ಕರೆ ನೀಡಿದರು.
ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ, ಸಮಿತಿ ಸದಸ್ಯರಾದ ಪ್ರಭುಸ್ವಾಮಿ ಅತ್ತನೂರು, ಚನ್ನಬಸವ ಹಿರೇಮಠ, ಸುರೇಶ ಮೇಟಿ, ಮಹಾಂತೇಶ ನರಕಲದಿನ್ನಿ, ಮದನಮೋಹನ, ಮಲ್ಲಿಕಾರ್ಜುನ ಕೆಂಭಾವಿ, ಅಮರೇಶ ಗಂಭೀರಮಠ, ಸೂಗೂರೇಶ ಸಾಲ್ಮನಿ, ಚೇತನ್ ಗುತ್ತೇದಾರ, ಆರ್.ಎಸ್. ಪಾಟೀಲ್ ಸೇರಿ ಇತರರು ಇದ್ದರು.
