ಭಾಜಪ ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಲಿಂಗಸುಗೂರು : ಸ್ಥಳೀಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.
ಪಕ್ಷದ ಮುಖಂಡರು ಮಡಿವಾಳ ಮಾಚಿದೇವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಪಕ್ಷದ ಹಿರಿಯ ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ ಹೇಸರೂರು, ಜಗನ್ನಾಥ ಕುಲಕರ್ಣಿ, ಪ್ರಭುಸ್ವಾಮಿ ಅತ್ತನೂರ, ಭೀಮಣ್ಣ ಹಿರೇಮನಿ, ಅಮರೇಶ ಮಡ್ಡಿ, ಮಲ್ಲಿಕಾರ್ಜುನ ಸಜ್ಜನ್, ಶಿವಪ್ರಕಾಶ್ ಕುಂಬಾರ, ಅಮರೇಶ ಗಂಭಿರಮಠ, ಬಸವರಾಜ ಹುನಕುಂಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ವೇತ ಲಾಲಗುಂದಿ, ಕಾರ್ಯದರ್ಶಿ ಜ್ಯೋತಿ ಸುಂಕದ ಸೇರಿ ಇತರರು ಉಪಸ್ಥಿತರಿದ್ದರು.

