ಪಲ್ಸ್ ಪೊಲೀಯೊ ಕಾರ್ಯಕ್ರಮಕ್ಕೆ ವಿಜ್ಜಮ್ಮ ಚಾಲನೆ
ವರದಿ-ಡಿ.ಜಿ.ಶಿವು.ಗೆಜ್ಜಲಗಟ್ಟಾ
ಹಟ್ಟಿ ಚಿನ್ನದಗಣಿ: ಪಟ್ಟಣದ ಹಳೆ ಪಂಚಾಯಿತಿ ಕಛೇರಿ ಬಳಿಯಲ್ಲಿರುವ ಉಪ ಆರೋಗ್ಯಕೇಂದ್ರದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ಮಗುವೊಂದಕ್ಕೆ ಪೊಲೀಯೊ ಹನಿ ಹಾಕುವ ಮೂಲಕ ಪಲ್ಸ್ ಪೊಲೀಯೊ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.
ಪ.ಪಂ.ಉಪಾಧ್ಯಕ್ಷೆ ನಾಗರತ್ನ ಶರಣಗೌಡ ಗುರಿಕಾರ, ವೈದ್ಯಾಧಿಕಾರಿಗಳಾದ ಲಕ್ಷ್ಮೀಕಾಂತ, ಮಹ್ಮದ್ ಮೊಸಿನ್, ಹಿರಿಯ ಆರೋಗ್ಯ ಸಹಾಯಕಿ ಗುರಮ್ಮ ಹಾಗೂ ಸಿಬ್ಬಂದಿಗಳು, ಆಶಾಕಾರ್ಯಕರ್ತರು ಇದ್ದರು.
ಕಂಪನಿ ಆಸ್ಪತ್ರೆ : ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಮುಖ್ಯ ಅಧೀಕ್ಷಕಿ ಡಾ. ರೂಪಾವತಿ ಮಗುವೊಂದಕ್ಕೆ ಪೊಲೀಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರ ಮಾವಿನಕಟ್ಟಿ, ಅಧಿಕಾರಿ ಕಾಮಣ್ಣ, ವೈದ್ಯಾಧಿಕಾರಿಗಳು, ಹಾಗೂ ಸಿಬ್ಬಂದಿಗಳು ಇದ್ದರು.

