ದೈಹಿಕ ಶಿಕ್ಷಣ ಶಿಕ್ಷಕರ ತಾಲೂಕು ಅದ್ಯಕ್ಷರಾಗಿ ಜಿತೇಂದ್ರಕುಮಾರ ಆಯ್ಕೆ
ಲಿಂಗಸುಗೂರು : ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅದ್ಯಕ್ಷರಾಗಿ ಗುಂಡಸಾಗರ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಿತೇಂದ್ರಕುಮಾರ ಗುತ್ತೇದಾರ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಗೌರವಾದ್ಯಕ್ಷರಾಗಿ ಮೇದನಾಪೂರ ಶಾಲೆಯ ಆರ್.ಶರಣಪ್ಪ ಮೇದನಾಪೂರ, ಅದ್ಯಕ್ಷರಾಗಿ ಜಿತೇಂದ್ರಕುಮಾರ ಗುತ್ತೇದಾರ ಗುಂಡಸಾಗರ, ಪ್ರಧಾನ ಕಾರ್ಯದರ್ಶಿಯಾಗಿ ಶೇಖ ದಸ್ತಗೀರ ಬಯ್ಯಾಪೂರ, ಉಪಾದ್ಯಕ್ಷರಾಗಿ ಗಂಗಮ್ಮ ಯರಡೋಣ, ಸಹಕಾರ್ಯದರ್ಶಿಯಾಗಿ ಹೆಚ್.ಕೆ. ಲಿಂಗಯ್ಯ ಹಟ್ಟಿ, ಕೋಶಾದ್ಯಕ್ಷರಾಗಿ ಬಸವರಾಜ ಮುದಗಲ್, ಸಂಘಟನಾ ಕಾರ್ಯದರ್ಶಿಗಳಾಗಿ ನಾಗಮ್ಮ ಗೌಡೂರು, ಸಂಗಪ್ಪ ಹುನಗುಂದ ಹಲ್ಕಾವಟಗಿ, ಸುಶೀಲಬಾಯಿ ಸರ್ಜಾಪೂರ, ಮುತ್ತಪ್ಪ ಯಲಗಲದಿನ್ನಿ ಅವರುಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ತಾಲೂಕು ಸಮನ್ವಯಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರು ಹಾಗೂ ಶಿಕ್ಷಕವರ್ಗ ಅಭಿನಂದನೆ ಸಲ್ಲಿಸಿದೆ.

