ರಾಯಚೂರು

ಹೃದ್ರೋಗ ತಜ್ಞ ಜನಾನುರಾಗಿ ಡಾ.ಲಕ್ಷ್ಮಪ್ಪ ವಯೋನಿವೃತ್ತಿ : ಬೀಳ್ಕೊಡುಗೆ


ಲಿಂಗಸುಗೂರು : ಸರಕಾರಿ ಆಸ್ಪತ್ರೆಯಲ್ಲಿ ಡಾ.ಲಕ್ಷ್ಮಪ್ಪ ಇದ್ದಾರೆಂದರೆ ಸಾಕು, ಚಿಕಿತ್ಸೆಗೆ ಬರುವ ರೋಗಿಯ ರೋಗ ಅರ್ಧ ಗುಣಮುಖವಾಗುತ್ತದೆ. ಅಷ್ಟರಮಟ್ಟಿಗೆ ವೈದ್ಯ ಲಕ್ಷ್ಮಪ್ಪ ಅವರು ತಮ್ಮ ಸೌಮ್ಯ ಸ್ವಭಾವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ.


ಇಷ್ಟೊಂದು ಜನಾನುರಾಗಿಯಾಗಿದ್ದ ಡಾ.ಲಕ್ಷ್ಮಪ್ಪ ಅವರು
ವಯೋನಿವೃತ್ತರಾದ ನಿಮಿತ್ಯ ಶನಿವಾರ ಸರಕಾರಿ ಆಸ್ಪತ್ರೆಯಲ್ಲಿ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಗಿತ್ತು.ಡಾ.ಲಕ್ಷ್ಮಪ್ಪ ಅವರ ಸೇವೆಯ ಬಗ್ಗೆ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಮಾತನಾಡಿ, ಹಿರಿಯ ವೈದ್ಯರ ಸೇವೆ ಮತ್ತು ಸೇವಾಮನೋಭಾವವನ್ನು ಯುವ ವೈದ್ಯರು ಅಳವಡಿಸಿಕೊಳ್ಳಬೇಕು. ಇವರು ಹಾಕಿಕೊಟ್ಟ ಮಾರ್ಗದಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾಗಬೇಕು.
ಡಾ.ಲಕ್ಷ್ಮಪ್ಪರ ವಯೋನಿವೃತ್ತ ಬದುಕು ನೆಮ್ಮದಿಯಿಂದ ಇರಲೆಂದು ಶುಭ ಹಾರೈಸಿದರು.


ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂಧಿಗಳು ಈ ಸಂದರ್ಭದಲ್ಲಿ
ಇದ್ದರು.

Leave a Reply

Your email address will not be published. Required fields are marked *

error: Content is protected !!