ಸ್ವಚ್ಛ ಭಾರತ, ಸ್ವಚ್ಚ ಕರ್ನಾಟಕ ಅಭಿಯಾನಕ್ಕೆ ವಜ್ಜಲ್ ಚಾಲನೆ
ವರದಿ-ಡಿ.ಜಿ.ಶಿವು.ಗೆಜ್ಜಲಗಟ್ಟಾ
ಹಟ್ಟಿ ಚಿನ್ನದಗಣಿ: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ತಾಲೂಕು ಘಟಕದಿಂದ ಪಟ್ಟಣದ ಪಂಚಾಯತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛಭಾರತ, ಸ್ವಚ್ಛ ಕರ್ನಾಟಕ ಅಭಿಯಾನಕ್ಕೆ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಈಶ್ವರ್ ವಜ್ಜಲ್ ಭಾನುವಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಮೋರ್ಚಾದ ಕಾರ್ಯಕರ್ತರಲ್ಲದೆ, ಬಿಜಿಪಿ ಮುಖಂಡರು ಸಹ ಭಾಗವಹಿಸಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.
ಈ ವೇಳೆ ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ನಗರ ಘಟಕದ ಅಧ್ಯಕ್ಷ ಗುಂಡಪ್ಪಗೌಡ ಗುರಿಕಾರ ಮಾಸ್ಟರ್, ತಾ.ಪಂ.ಸದಸ್ಯೆಯಾದ ಬಸ್ಸಮ್ಮ ಪರಮೇಶ ಯಾದವ್, ಮುಖಂಡರಾದ ಶಂಕರಗೌಡ ಬಳಗಾನೂರು, ಪರಮೇಶ ಯಾದವ್, ಸೋಮಣ್ಣ ಮಲ್ಲಟ್, ಮಾನಪ್ಪ ಲಿಂಗಸುಗೂರು, ವೆಂಕೋಬ್ ಪವಾಡೆ, ಸತ್ಯನಾರಾಯಣ ಶೆಟ್ಟಿ, ಅಮರಗುಂಡಯ್ಯಸ್ವಾಮಿ, ಶ್ರೀನಿವಾಸ್(ಮಧುಶ್ರೀ), ಶಿವು ತಬಲಾಜಿ, ಸಂದೀಪ್ ಪಾಟೀಲ್, ಶಿವಪುತ್ರಪ್ಪ, ಹುಲಿಗೇಮ್ಮ, ವಾಸಂತಿ, ಗುಂಡಮ್ಮ, ಯಲ್ಲಮ್ಮ, ಶಶಿ ಬಡಿಗೇರ್ ಸೇರಿದಂತೆ ಇತರರಿದ್ದರು.

