ಹಿಂದೂ ಜಾಗರಣಾ ವೇದಿಕೆ : ನೀರಿನ ಅರವಟ್ಟಿಗೆ ಉದ್ಘಾಟನೆ
ಲಿಂಗಸೂಗೂರು : ಸ್ಥಳೀಯ ಬಸ್ಟಾಂಡ್ ಪಕ್ಕದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನೀರಿನ ಅರವಟ್ಟಿಗೆಯನ್ನು ಉದ್ಘಾಟನೆ ಮಾಡಲಾಯಿತು.
ಸಾರ್ವಜನಿಕರು ತಂಪಾದ ನೀರಿನ ಸೇವನೆ ಮಾಡಿ ಅರವಟ್ಟಿಗೆಯ ಸದುಪಯೋಗ ಪಡೆದುಕೊಳ್ಳಬೇಕು. ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸುವಂತೆ ಮಕ್ಕಳ ತಜ್ಞ ವೈದ್ಯ ಆನಂದ ಚೌದರಿ ಕರೆ ನೀಡಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಜು ಟ್ಯಾಟೂ, ಹರೀಶ್ ಸೋಮನಾಥ, ವಿಕ್ರಂಸೂರ್ಯ, ಸಂಜೀವ ಕಿರಣ್ ಪಲ್ಯದ್, ಜಗದೀಶ್,ಬಸವರಾಜು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

