ಲಿಂಗಸುಗೂರು : ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ
ಲಿಂಗಸುಗೂರು : ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸಹೋದರತೆಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿದರು. ಸರಕಾರಿ ಆಸ್ಪತ್ರೆ ಹಾಗೂ ಕಚೇರಿಗಳಿಗೆ ತೆರಳಿ ಅಧಿಕಾರಿ ಸಿಬ್ಬಂಧಿಗಳಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸುವ ಮೂಲಕ ಹಬ್ಬ ಆಚರಿಸಿದರು.
ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಸಾರ್ವಜನಿಕರ ಸೇವೆಯನ್ನು ಕಿಂಚಿತ್ತೂ ಬೇಸರವಿಲ್ಲದೇ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕರ್ತವ್ಯ ನಿಷ್ಠೆ ತೋರುತ್ತಿರುವ ಸರಕಾರಿ ಆಸ್ಪತ್ರೆ ಸಿಬ್ಬಂಧಿಗಳು ಹಾಗೂ ಆರಕ್ಷಕರಿಗೆ ದೇವರು ಆಯುರಾರೋಗ್ಯ ಕರುಣಿಸಲೆಂದು ಮಹಿಳಾ ಮಣಿಗಳು ಶುಭ ಕೋರಿದರು.
ಮೊರ್ಚಾದ ಅದ್ಯಕ್ಷೆ ಜಯಶ್ರೀ ಸಕ್ರಿ, ಪ್ರಧಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ, ಮುಖಂಡರಾದ ನೀಲಮ್ಮ ಪಾಟೀಲ್, ರಾಜೇಶ್ವರಿ, ಸರೋಜಮ್ಮ, ಲಕ್ಷ್ಮಿದೇವಿ, ಅಯ್ಯಮ್ಮ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

