ಲಿಂಗಸುಗೂರು : ನೂಲಿಚಂದಯ್ಯ ಜಯಂತಿ ಆಚರಣೆ
ಲಿಂಗಸುಗೂರು : ಸ್ಥಳೀಯ ಕೊರವ (ಭಜಂತ್ರಿ) ಸಮಾಜದ ಸಮುದಾಯ ಭವನದಲ್ಲಿ ಶಿವಶರಣ ನೂಲಿ ಚಂದಯ್ಯನವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಸಮಾಜದ ಅದ್ಯಕ್ಷ ಯೋಗಪ್ಪ ಭಜಂತ್ರಿಯವರು ನೂಲಿ ಚಂದಯ್ಯನವರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್‍ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ ನೀಡಿದರು.
ಇತರೆ ಸಮುದಾಯದೊಂದಿಗೆ ಸ್ನೇಹ, ಬ್ರತೃತ್ವದಿಂದ ಸಮಾಜದಲ್ಲಿ ಮಾದರಿಯ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಶ್ರಮಿಸಬೇಕು. ಸಮಾಜವು ಅತ್ಯಂತ ಹಿಂದುಳಿದಿದ್ದು, ಆರ್ಥಿಕ ಸ್ವಾವಲಂಬಿಗಳಾಗಲು ಬೇರೆ ಸಮಾಜದವರು ಕಟ್ಟುವಂತೆ ಆರ್ಥಿಕ ಸಹಕಾರಿ ಸಂಘಗಳನ್ನು ಕಟ್ಟಲು ನಮ್ಮ ಸಮಾಜದ ಮುಖಂಡರು ಮುಂದಾಗಬೇಕೆಂಬ ಅಭಿಪ್ರಾಯಗಳನ್ನು ಹಿರಿಯರು ವ್ಯಕ್ತಪಡಿಸಿದರು.
ಸಮಾಜದ ಮುಖಂಡರಾದ ಮುದುಕಪ್ಪ ಭಜಂತ್ರಿ, ಹನುಮಂತಪ್ಪ ಆನೆಹೊಸೂರು, ಯಮನಪ್ಪ ಆಮದಿಹಾಳ, ಹುಚ್ಚೇಶ್ವರ ಭಜಂತ್ರಿ, ಸಾಬಣ್ಣ ಭಜಂತ್ರಿ, ಮರಿಯಪ್ಪ ತುರಡಗಿ, ಸಿದ್ದಪ್ಪ ಭಜಂತ್ರಿ, ಪತ್ರಕರ್ತರಾದ ರಾಘವೇಂದ್ರ ಭಜಂತ್ರಿ, ಪಂಪಾಪತಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

