ಕಸಾಪದಿಂದ ಆಧುನಿಕ ಸಾಹಿತ್ಯ ವಿಚಾರ ಸಂಕಿರಣ, ಕವನ ಸಂಕಲನ ಬಿಡುಗಡೆ
ಲಿಂಗಸುಗೂರು : ಸ್ಥಳೀಯ ವಿಸಿಬಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಯಚೂರು ಜಿಲ್ಲೆಯ ಆಧುನಿಕ ಸಾಹಿತ್ಯದ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಡಾ.ಶಶಿಕಾಂತ ಕಾಡ್ಲೂರು ಅವರು ರಚಿಸಿದ ಬಾಳನೆಡೆಗೆ ಕವನ ಸಂಕಲನವನ್ನು ಬಿಡುಗಡೆ ಕಾರ್ಯಕ್ರಮ ಜರುಗಿತು.
ಸಾಹಿತಿ ಡಾ.ಬಸವರಾಜ ಸಬರದ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು ಅದ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅದ್ಯಕ್ಷ ಪ್ರೊ. ಜಿ.ವಿ. ಕೆಂಚನಗುಡ್ಡ, ಪ್ರಧಾನ ಕಾರ್ಯದರ್ಶಿ ದುರ್ಗಾಸಿಂಗ್ ರಜಪೂತ್, ಪದಾಧಿಕಾರಿಗಳಾದ ಪ್ರೋ.ವೈವೈ ಈಳಿಗೇರ್, ಪ್ರೊ. ಚಂದ್ರಶೇಖರ ಪಾಟೀಲ್, ಪ್ರೋ.ಜಗದೀಶ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

