ಅಂಗನವಾಡಿ ನೌಕರರ ಬೇಡಿಕೆಗಳ ಪರಿಶೀಲನೆಗೆ ಒತ್ತಾಯಿಸಿ ಸತ್ಯಾಗ್ರಹ
ಲಿಂಗಸುಗೂರು : 2021-22ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯ ಸರಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ಮಾಡುವಂತೆ ಒತ್ತಾಯಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾದಿಕಾರಿಗಳು ಸಿಡಿಪಿಒ ಕಚೇರಿ ಬಳಿ ಸೋಮವಾರ ಸತ್ಯಾಗ್ರಹ ನಡೆಸಿದರು.
ಹಲವು ಹಂತಗಳ ಹೋರಾಟಗಳ ಒತ್ತಾಯದ ಭಾಗವಾಗಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಠತಾ ಆಧಾರದಲ್ಲಿ 153.25 ಕೋಟಿ ರೂಪಾಯಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿಗಾಗಿ 6.99 ಕೋಟಿ ರೂಪಾಯಿ,ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸದ ಮೊತ್ತ 131.42 ಕೋಟಿ ರೂಪಾಯಿ, ನಿವೃತ್ತಿ ಸೌಲಭ್ಯಕ್ಕಾಗಿ 47.82 ಕೋಟಿ ರೂಪಾಯಿ ಸೇರಿ
ಒಟ್ಟು 339.48 ಕೋಟಿ ರೂಪಾಯಿಗಳ ಮಂಜೂರಾತಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ಮೊತ್ತ ನೀಡಿದ್ದರೆ 1.30 ಲಕ್ಷ ಕುಟುಂಬಗಳಿಗೆ ಸಹಾಯವಾಗುತ್ತಿತ್ತು. ಆದರೆ, ರಾಜ್ಯ ಸರಕಾರ ಈ ಮೂರು ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡಿಲ್ಲ. 2016 ರಿಂದ 7304 ಜನ ನಿವೃತ್ತಿಯಾಗಿದ್ದಾರೆ. ಅವರಿಗೆ ಕೊಡಬೇಕಾಗಿದ್ದ ಇಡುಗಂಟನ್ನು ಕೂಡ ಸರಕಾರ ಪರಿಗಣನೆ ಮಾಡಿಲ್ಲ.
ಕೇವಲ ನಾಮಕಾವಾಸ್ತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂತೆ ಬಜೆಟ್ ಮಂಡಿಸಿ, ಮಹಿಳಾ ವಿರೋಧಿ ನೀತಿ ಅನುಸರಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಮಾರ್ಚ್ 15ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುವುದಲ್ಲದೇ,
ಮಾರ್ಚ್ 16ರಿಂದ ಹೆಚ್ಚುವರಿ ಕೆಲಸಗಳಾದ ಈ-ಸರ್ವೆ, ಆರ್‍ಡಿಪಿಆರ್ ನಿಂದ ಕೊಟ್ಟಿರುವ ಸರ್ವೆ, ಬಿಪಿಎಲ್ ಕಾರ್ಡ್, ಆರ್‍ಸಿಹೆಚ್ ಸರ್ವೆ, ಭಾಗ್ಯಲಕ್ಷ್ಮಿ,ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಮುಂತಾದ ಕೆಲಸಗಳನ್ನು ಭಹಿಷ್ಕರಿಸಲು ಸಂಘಟನೆ ಕರೆ ಕೊಟ್ಟಿದೆ. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರನ್ನು ಕೊಡುವ
ತನಕ ಅಡುಗೆ ಮಾಡುವುದಿಲ್ಲ ಎನ್ನುವ ತೀರ್ಮಾನ
ಕೈಗೊಳ್ಳಲಾಗಿದೆ ಎಂದು ಸಂಘಟನೆ ಗೌರವಾದ್ಯಕ್ಷ ಶೇಕ್ಷಾಖಾದ್ರಿ ಹೇಳಿದರು.

